ದಿಶಾ 'ಹತ್ಯಾಚಾರ': ಎನ್ಕೌಂಟರ್ ಬೆನ್ನಲ್ಲೇ ಹಿರೋಗಳಾದ ಪೊಲೀಸರು, ರಾಖಿ ಕಟ್ಟಿ, ಸಿಹಿ ತಿನ್ನಿಸಿ, ಹೂಗಳ ಸುರಿಮಳೆ!

ಹೈದರಾಬಾದ್ ಪಶು ವೈದ್ಯೆ ದಿಶಾ ಹತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಪಶು ವೈದ್ಯೆಯ ಅಕ್ಕಪಕ್ಕದ ಕಾಲನಿ ನಿವಾಸಿಗಳು ಇದೀಗ ಹೈದರಾಬಾದ್ ಪೊಲೀಸರಿಗೆ ರಾಖಿ ಕಟ್ಟಿ ಅವರ ಮೇಲೆ ಹೂವಿನ ಸುರಿಮಳೆ ಗೈದು ತಮ್ಮ ಅಭಿಮಾನ ತೋರಿಸುತ್ತಿದ್ದಾರೆ.
ಪೊಲೀಸರಿಗೆ ರಾಖಿ ಕಟ್ಟಿದ ಮಹಿಳೆಯರು
ಪೊಲೀಸರಿಗೆ ರಾಖಿ ಕಟ್ಟಿದ ಮಹಿಳೆಯರು

ಹೈದರಾಬಾದ್: ಹೈದರಾಬಾದ್ ಪಶು ವೈದ್ಯೆ ದಿಶಾ ಹತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಪಶು ವೈದ್ಯೆಯ ಅಕ್ಕಪಕ್ಕದ ಕಾಲನಿ ನಿವಾಸಿಗಳು ಇದೀಗ ಹೈದರಾಬಾದ್ ಪೊಲೀಸರಿಗೆ ರಾಖಿ ಕಟ್ಟಿ ಅವರ ಮೇಲೆ ಹೂವಿನ ಸುರಿಮಳೆ ಗೈದು ತಮ್ಮ ಅಭಿಮಾನ ತೋರಿಸುತ್ತಿದ್ದಾರೆ.

ಹೌದು.. ಯಾವ ಜಾಗದಲ್ಲಿ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿಯನ್ನು ನಾಲ್ಕು ಮಂದಿ ಕಾಮುಕ ರಕ್ಕಸರು ಕೊಂದು ಬೆಂಕಿ ಇಟ್ಟರೋ ಅದೇ ಜಾಗದಲ್ಲಿ ಪೊಲೀಸರು ಎಲ್ಲ ನಾಲ್ಕೂ ಮಂದಿ ಆರೋಪಿಗಳು ಗುಂಡಿಟ್ಟು ಎನ್ಕೌಂಟರ್ ಮಾಡಿದ್ದಾರೆ. ಇದೀಗ ಈ ಎನ್ಕೌಂಟರ್ ನಡೆದ ಚಟಾನ್ ಪಲ್ಲಿ ಬ್ರಿಡ್ಜ್ ಬಳಿಗೆ ಸಾವಿರಾರು ಜನ ಆಗಮಿಸುತ್ತಿದ್ದು, ಸ್ಥಳದಲ್ಲಿರುವ ಪೊಲೀಸರಿಗೆ ಅಭಿನಂದನೆ ಹೇಳಿದ್ದಲ್ಲದೇ ಅವರ ಮೇಲೆ ರೋಜಾ ಹೂಗಳ ಎಲೆಗಳನ್ನು ಸುರಿಮಳೆ ಗೈದು ಪೊಲೀಸರಿಗೆ ಜೈಕಾರ ಕೂಗುತ್ತಿದ್ದಾರೆ.

ಇತ್ತ ದಿಶಾ ಮನೆಯ ಅಕ್ಕಪಕ್ಕದಲ್ಲಿನ ಪೊಲೀಸ್ ಠಾಣೆಗಳಿಗೆ ತೆರಳಿ ಸ್ಥಳೀಯ ಮಹಿಳೆಯರು ಮತ್ತು ಯುವತಿಯರು ಪೊಲೀಸರ ಕೈಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ ತಮ್ಮ ಧನ್ಯವಾದ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com