ಹೈದರಾಬಾದ್ ಎನ್ ಕೌಂಟರ್: ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಎನ್ಎಚ್ಆರ್ ಸಿ, ತನಿಖೆಗೆ ಆದೇಶ

ಪಶು ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಶುಕ್ರವಾರ ಎನ್ ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸರ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ...
ಎನ್ ಕೌಂಟರ್ ಗೆ ಬಲಿಯಾದ ಆರೋಪಿಗಳು
ಎನ್ ಕೌಂಟರ್ ಗೆ ಬಲಿಯಾದ ಆರೋಪಿಗಳು

ನವದೆಹಲಿ: ಪಶು ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಶುಕ್ರವಾರ ಎನ್ ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸರ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ) ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ತನಿಖೆಗೆ ಆದೇಶಿಸಿದೆ.

ಇಂದು ಬೆಳಗಿನ ಜಾವ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವುದು ಅತ್ಯಂತ ಕಳವಳಕಾರಿ ಎಂದು ಮಾನವ ಹಕ್ಕುಗಳ ಆಯೋಗ ಹೇಳಿದೆ.

ಕಳೆದ ವಾರ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿಯವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ ಆರೋಪಿಗಳು, ನಂತರ ಸೀಮೆಎಣ್ಣೆ ಹಾಕಿ ಸುಟ್ಟುಹಾಕಿದ್ದರು. ಈ ಹೀನ ಕೃತ್ಯಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಎಲ್ಲಾ ನಾಲ್ವರು ಆರೋಪಿಗಳಾದ ಶಿವು, ಆರಿಫ್, ಚೆನ್ನಕೇಶವುಲು, ನವೀನ್ ಎಂಬುವವರನ್ನು ಪೊಲೀಸರು ಇಂದು ಎನ್'ಕೌಂಟರ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com