ನಿತ್ಯಾನಂದನಿಗೆ ಯಾವುದೇ ದ್ವೀಪ ಮಾರಾಟ ಮಾಡಿಲ್ಲ, ಆತ ಹೈಟಿಯಲ್ಲಿರಬಹುದು: ಈಕ್ವೆಡಾರ್

ಇತ್ತೀಚಿಗಷ್ಟೇ ದೇಶ ತೊರೆದ ಅತ್ಯಾಚಾರ ಆರೋಪಿ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಈಕ್ವೆಡಾರ್ ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿದ್ದಾರೆ
ನಿತ್ಯಾನಂದ ಸ್ವಾಮೀಜಿ
ನಿತ್ಯಾನಂದ ಸ್ವಾಮೀಜಿ

ಬೆಂಗಳೂರು: ಇತ್ತೀಚಿಗಷ್ಟೇ ದೇಶ ತೊರೆದ ಅತ್ಯಾಚಾರ ಆರೋಪಿ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಈಕ್ವೆಡಾರ್ ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿದ್ದಾರೆ ಎಂಬ ವರದಿಯನ್ನು ದಕ್ಷಿಣ ಅಮೆರಿಕ ಖಂಡದ ದೇಶ ಸ್ಪಷ್ಟವಾಗಿ ತಳ್ಳಿಹಾಕಿದೆ.

ನಿತ್ಯಾನಂದನಿಗೆ ನಾವು ಯಾವುದೇ ದ್ವೀಪ ಮಾರಾಟ ಮಾಡಿಲ್ಲ. ದಕ್ಷಿಣ ಅಮೆರಿಕದ ಆಸುಪಾಸಿನಲ್ಲೂ ಯಾವುದೇ ಪ್ರದೇಶವನ್ನು ನಿತ್ಯಾನಂದರಿಗೆ ಮಾರಾಟ ಮಾಡಲು ನಾವು ನೆರವಾಗಿಲ್ಲ. ತಮ್ಮ ದೇಶಕ್ಕೆ ಆಶ್ರಯ ಕೋರಿ ಬಂದಿದ್ದು ನಿಜ. ಆದರೆ, ಅವರಿಗೆ ತಾವು ಆಶ್ರಯ ನೀಡಲು ನಿರಾಕರಿಸಿದ್ದು, ಬಳಿಕ ನಿತ್ಯಾನಂದ ಈಕ್ವೆಡಾರ್ ಬಿಟ್ಟು ಹೈಟಿ ದೇಶಕ್ಕೆ ಹೋಗಿರಬಹುದು ಎಂದು ಈಕ್ವೆಡಾರ್ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. 

ನಾಪತ್ತೆಯಾಗಿರುವ ನಿತ್ಯಾನಂದ ಈಗ ದಕ್ಷಿಣ ಅಮೆರಿಕ ಖಂಡದ ಈಕ್ವೆಡಾರ್ ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿದ್ದು, ಅಲ್ಲಿ ಹೊಸ ದೇಶವನ್ನೇ ಕಟ್ಟಲು ಹೊರಟಿದ್ದಾರೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿದ್ದವು. ಮಾಧ್ಯಮಗಳ ವರದಿಯನ್ನು ಈಕ್ವೆಡಾರ್ ಸ್ಪಷ್ಟವಾಗಿ ತಳ್ಳಿಹಾಕಿದೆ.

ಈಕ್ವೆಡಾರ್ ರಾಯಭಾರ ಕಚೇರಿಯ ಈ ಹೇಳಿಕೆಯಿಂದ ನಿತ್ಯಾನಂದ ಭಾರತವನ್ನು ತೊರೆದು ಹೊರದೇಶಕ್ಕೆ ಹೋಗಿರುವುದು ಖಚಿತವಾಗಿದೆ. ಈಕ್ವೆಡಾರ್ ದೇಶಕ್ಕೂ ಹೋಗಿ ಅದೃಷ್ಟಪರೀಕ್ಷೆ ಮಾಡಲು ಯತ್ನಿಸಿರುವುದೂ ನಿಜವೇ. ಈಗ ಹೈಟಿಯಲ್ಲಿ ನಿತ್ಯಾನಂದ ಇದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಬೇಕಿದೆ.

ಟ್ರಿನಿಡಾಡ್ ಅಂಡ್ ಟೊಬಾಗೋ ದ್ವೀಪಗಳ ಸಮೀಪ ಇರುವ ಕೈಲಾಸ ದ್ವೀಪವನ್ನು ಹಿಂದೂ ಸಾರ್ವಭೌಮ ದೇಶ ಎಂದು ನಿತ್ಯಾನಂದ ತನ್ನ ವೆಬ್ ಸೈಟ್ ನಲ್ಲಿ ಸ್ವಘೋಷಣೆ ಮಾಡಿಕೊಂಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com