ಈರುಳ್ಳಿ, ಬೆಳ್ಳುಳ್ಳಿ, ಮಾಂಸ ತಿನ್ನಬೇಡಿ ಎಲ್ಲಾ ಉಳಿತಾಯ ಆಗುತ್ತೆ: ಅಜಂ ಖಾನ್

ಈರುಳ್ಳಿ ಬೆಲೆ ಏರಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಮಾಜವಾದಿ ಪಕ್ಷದ ಮುಖಂಡ ಆಜಮ್ ಖಾನ್ ಈರುಳ್ಳಿ ಸೇವನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅಜಂ ಖಾನ್
ಅಜಂ ಖಾನ್

ನವದೆಹಲಿ: ಈರುಳ್ಳಿ ಬೆಲೆ ಏರಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಮಾಜವಾದಿ ಪಕ್ಷದ ಮುಖಂಡ ಆಜಮ್ ಖಾನ್ ಈರುಳ್ಳಿ ಸೇವನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈರುಳ್ಳಿ ತಿನ್ನುವುದನ್ನು ನಿಲ್ಲಿಸಿ, ಅದನ್ನು ತಿನ್ನಲೇ ಬೇಕು ಎನ್ನುವುದು ಕಡ್ಡಾಯವೇ? ನಮ್ಮ ಜೈನ ಸಹೋದರರು ಅವುಗಳನ್ನು ತಿನ್ನುವುದಿಲ್ಲ. ಈರುಳ್ಳಿ ತಿನ್ನುವುದನ್ನು ನಿಲ್ಲಿಸಿ, ಬೆಳ್ಳುಳ್ಳಿ ತಿನ್ನುವುದನ್ನು ನಿಲ್ಲಿಸಿ, ಮಾಂಸ ತಿನ್ನುವುದನ್ನು ನಿಲ್ಲಿಸಿ, ಎಲ್ಲವೂ ಉಳಿತಾಯವಾಗುತ್ತದೆ" ಎಂದು ತಿಳಿಸಿದ್ದಾರೆ.

"ಈರುಳ್ಳಿ ತಿನ್ನಬೇಡಿ, ಅದು ದುರ್ವಾಸನೆಯನ್ನು ನೀಡುತ್ತದೆ. ಒಮ್ಮೆ ರಾಣಿಯೊಬ್ಬರು 'ಸಾರ್ವಜನಿಕರಿಗೆ ತಿನ್ನಲು ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಲು ಬಿಡಿ' ಎಂದು ಹೇಳಿದ್ದರು" ಎಂದು ಉದಾಹರಣೆ ನೀಡಿದ ಆಜಮ್ ಖಾನ್, ಈರುಳ್ಳಿ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಈರುಳ್ಳಿ ತಿನ್ನುವುದನ್ನು ನಿಲ್ಲಿಸುವಂತೆ ರಾಷ್ಟ್ರಕ್ಕೆ ಅವರು ನೀಡಿದ ಸಂದೇಶ ಎಂದು ತೋರುತ್ತಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com