ಸರ್ಕಾರ ರಚಿಸಲು ಶರದ್ ಪವಾರ್ ಬೆಂಬಲ ಇದೆ ಅಂತ ಅಜಿತ್ ಹೇಳಿದ್ದರು: ದೇವೇಂದ್ರ ಫಡ್ನವಿಸ್
ಮಹಾರಾಷ್ಟ್ರ ಸರ್ಕಾರ ರಚಿಸಲು ಶರದ್ ಪವಾರ್ ಬೆಂಬಲ ಇದೆ ಎಂದು ಅಜಿತ್ ಹೇಳಿದ್ದನ್ನು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಬಹಿರಂಗಪಡಿಸಿದ್ದಾರೆ.
Published: 07th December 2019 10:47 PM | Last Updated: 07th December 2019 10:47 PM | A+A A-

ಸರ್ಕಾರ ರಚಿಸಲು ಶರದ್ ಪವಾರ್ ಬೆಂಬಲ ಇದೆ ಅಂತ ಅಜಿತ್ ಹೇಳಿದ್ದರು: ದೇವೇಂದ್ರ ಫಡ್ನವಿಸ್
ಮುಂಬೈ: ಮಹಾರಾಷ್ಟ್ರ ಸರ್ಕಾರ ರಚಿಸಲು ಶರದ್ ಪವಾರ್ ಬೆಂಬಲ ಇದೆ ಎಂದು ಅಜಿತ್ ಹೇಳಿದ್ದನ್ನು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಬಹಿರಂಗಪಡಿಸಿದ್ದಾರೆ.
ಜಿ ನ್ಯೂಸ್ ನೊಂದಿಗೆ ಮಾತನಾಡಿರುವ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ರಚಿಸಬೇಕು ಇದಕ್ಕೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸಂಪೂರ್ಣ ಬೆಂಬಲ ನನಗೆ ಇದೆ ಎಂದು ಅಜಿತ್ ಪವಾರ್ ಹೇಳಿದ್ದರೆಂದು ಹೇಳಿದ್ದಾರೆ.
ಶಿವಸೇನೆ ಹಾಗೂ ಕಾಂಗ್ರೆಸ್ ಎನ್ ಸಿಪಿ ಮೂರು ಪಕ್ಷಗಳು ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ, ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಬೆಂಬಲ ನೀಡುತ್ತಿರುವುದಾಗಿ ಅಜಿತ್ ಪವಾರ್ ಹೇಳಿದ್ದರು. ಈ ಕಾರಣಕ್ಕಾಗಿಯೇ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು ಎಂದು ವಿಪಕ್ಷ ನಾಯಕರಾಗಿರುವ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.