ಜಾರ್ಖಂಡ್ ಚುನಾವಣೆ: 2ನೇ ಹಂತದಲ್ಲಿ 20 ಸ್ಥಾನಗಳಿಗೆ ಮತದಾನ ಅಂತ್ಯ, ಶೇ. 63 ರಷ್ಟು ಮತದಾನ

ಸಿಸಾಯ್‍ನಲ್ಲಿ ಯುವಕನೊಬ್ಬ ಪೊಲೀಸರ ಗುಂಡೇಟಿನಿಂದ ಮೃತಪಟ್ಟಿರುವುದು ಸೇರಿದಂತೆ ಕೆಲ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದಂತೆ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದ್ದು, 20 ಕ್ಷೇತ್ರಗಳಲ್ಲಿ ಶೇ. 63. 36ರಷ್ಟು ಮತದಾನವಾಗಿದೆ.
ರಘುವರ ದಾಸ್
ರಘುವರ ದಾಸ್

ರಾಂಚಿ: ಸಿಸಾಯ್‍ನಲ್ಲಿ ಯುವಕನೊಬ್ಬ ಪೊಲೀಸರ ಗುಂಡೇಟಿನಿಂದ ಮೃತಪಟ್ಟಿರುವುದು ಸೇರಿದಂತೆ ಕೆಲ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದಂತೆ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದ್ದು, 20 ಕ್ಷೇತ್ರಗಳಲ್ಲಿ ಶೇ. 63. 36ರಷ್ಟು ಮತದಾನವಾಗಿದೆ.

ಈಗ ದೊರೆತಿರುವ ಮಾಹಿತಿಯಂತೆ ಸಿಸಾಯ್‍ನಲ್ಲಿ ಅತಿ ಹೆಚ್ಚು 68.60ರಷ್ಟು ಮತದಾನವಾಗಿದೆ.

ಜಮ್‍ಷೆಡ್‍ಪುರ ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಿಗೆ ಸಂಜೆ 5ರವರೆಗೆ ಮತದಾನ ನಡೆಯಿತು. ಉಳಿದಂತೆ ಇತರ ಕ್ಷೇತ್ರಗಳಲ್ಲಿ ನಕ್ಸಲರ ಹಾವಳಿಯಿಂದ ಸಂಜೆ 3 ಗಂಟೆವರೆಗೆ ಮಾತ್ರ ಮತದಾನ ನಡೆದಿತ್ತು.

ಇಂದು ನಡೆದ 20 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ, ಒಂದು ಕ್ಷೇತ್ರ ಪರಿಶಿಷ್ಟ ಜಾತಿಗೆ, ಇತರ ಮೂರು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು.

ಮುಖ್ಯಮಂತ್ರಿ ರಘುವರ ದಾಸ್ ಜೆಮ್‍ಶೆಡ್‍ಪುರ್ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಮಾಜಿ ಸಚಿವ ಸರಯು ರಾಯ್ ಮತ್ತು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಮುಖ್ಯಮಂತ್ರಿಗೆ ಎದುರಾಳಿಯಾಗಿದ್ದಾರೆ.

ರಘುವರ ದಾಸ್ ಸೇರಿದಂತೆ ಒಟ್ಟು 260 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿಸೆಂಬರ್ 23ರಂದು ಬಹಿರಂಗಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com