ಕಾಮುಕರ ಎನ್'ಕೌಂಟರ್: ಆರೋಪಿಗಳ ಮೃತದೇಹ ಹಸ್ತಾಂತರಕ್ಕೆ ಕುಟುಂಬಸ್ಥರ ಧರಣಿ

ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಎನ್‍ಕೌಂಟರ್‍ ನಲ್ಲಿ ಹತ್ಯೆಯಾದ ಆರೋಪಿಗಳಲ್ಲಿ ಒಬ್ಬನಾದ ಚೆನ್ನಕೇಶವಲು ಮೃತದೇಹವನ್ನು ತಮಗೆ ಒಪ್ಪಿಸುವಂತೆ ಆತನ ಕುಟುಂಬದವರು ನಾರಾಯಣಪೇಟ್‍ ಜಿಲ್ಲೆಯ ಮುತ್ಕಲ್‍ ಮಂಡಲದ ಗುಡಿಗಂಡ್ಲ ಗ್ರಾಮದಲ್ಲಿ ಧರಣಿ ನಡೆಸಿದ್ದಾರೆ.

Published: 07th December 2019 08:41 AM  |   Last Updated: 07th December 2019 08:41 AM   |  A+A-


Accused

ಹತ್ಯೆಯಾದ ಆರೋಪಿಗಳು

Posted By : Manjula VN
Source : UNI

ಹೈದರಾಬಾದ್‍: ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಎನ್‍ಕೌಂಟರ್‍ ನಲ್ಲಿ ಹತ್ಯೆಯಾದ ಆರೋಪಿಗಳಲ್ಲಿ ಒಬ್ಬನಾದ ಚೆನ್ನಕೇಶವಲು ಮೃತದೇಹವನ್ನು ತಮಗೆ ಒಪ್ಪಿಸುವಂತೆ ಆತನ ಕುಟುಂಬದವರು ನಾರಾಯಣಪೇಟ್‍ ಜಿಲ್ಲೆಯ ಮುತ್ಕಲ್‍ ಮಂಡಲದ ಗುಡಿಗಂಡ್ಲ ಗ್ರಾಮದಲ್ಲಿ ಧರಣಿ ನಡೆಸಿದ್ದಾರೆ.

ಆರೋಪಿ ಚೆನ್ನಕೇಶವುಲು ಪತ್ನಿ ರೇಣುಕಾ ಮತ್ತು ತಾಯಿ ಜಯಮ್ಮ ಅವರು ರಸ್ತೆಯಲ್ಲಿ ಧರಣಿ ನಡೆಸಿ, ಮೃತದೇಹದ ಅಂತ್ಯಕ್ರಿಯೆಯನ್ನು ಪೊಲೀಸರು ನಡೆಸುವ ಬದಲಿಗೆ ತಮ್ಮ ಕೃಷಿ ಜಮೀನನಲ್ಲೇ ನೆರವೇರಿಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

ಹತ್ಯೆಯ ಆರೋಪಿಯ ಕುಟುಂಬದವರು ಧರಣಿ ನಡೆಸಿದ್ದರಿಂದ ಈ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು.

Stay up to date on all the latest ರಾಷ್ಟ್ರೀಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp