ಹೈದರಾಬಾದ್ ಎನ್ ಕೌಂಟರ್: ನಗರಕ್ಕೆ ಆಗಮಿಸಿದ ಎನ್ ಎಚ್ ಆರ್ ಸಿ ತಂಡ, ಅಧಿಕಾರಿಗಳಿಂದ ತನಿಖೆ 

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡವೊಂದು ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬೆಳಗ್ಗೆ ಬಂದಿಳಿದಿದೆ.  
ನಗರಕ್ಕೆ ಬಂದಿಳಿದ ಎನ್ ಎಚ್ ಆರ್ ಸಿ ತಂಡ
ನಗರಕ್ಕೆ ಬಂದಿಳಿದ ಎನ್ ಎಚ್ ಆರ್ ಸಿ ತಂಡ

ಹೈದರಾಬಾದ್: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡವೊಂದು ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬೆಳಗ್ಗೆ ಬಂದಿಳಿದಿದೆ. 


26 ವರ್ಷದ ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಬೆಂಕಿಯಿಂದ ಸುಟ್ಟು ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ನಿನ್ನೆ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಮಾನವ ಹಕ್ಕುಗಳ ಆಯೋಗದ ಸದಸ್ಯರು ಆಗಮಿಸಿದ್ದಾರೆ.


ಅವರು ಮೊದಲಿಗೆ ಷಡ್ನಗರ್ ಸಮೀಪ ಚಟಂಪಳ್ಳಿ ಗ್ರಾಮಕ್ಕೆ ಭೇಟಿ ನೀಡಲಿದ್ದು ಅಲ್ಲಿ ಸ್ಥಳದ ತನಿಖೆ ನಡೆಸಿ ಎನ್ ಕೌಂಟರ್ ಹೇಗೆ ನಡೆಯಿತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ. ಪ್ರಾಥಮಿಕ ತನಿಖೆಯಾಗಿ ಈ ಸಂಬಂಧ ಪೊಲೀಸ್ ಅಧಿಕಾರಿಗಳನ್ನು ಕೂಡ ವಿಚಾರಣೆ ನಡೆಸಲಿದ್ದಾರೆ.


ನಾಲ್ವರು ಆರೋಪಿಗಳ ಮೃತದೇಹವನ್ನು ಇರಿಸಿರುವ ಚಟಂಪಳ್ಳಿಯಿಂದ 80 ಕಿಲೋ ಮೀಟರ್ ದೂರದಲ್ಲಿರುವ ಮಹಬೂಬ್ ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ತಂಡ ಭೇಟಿ ನೀಡಲಿದ್ದಾರೆ, ಆರೋಪಿಗಳ ಕುಟುಂಬದವರನ್ನು ಭೇಟಿ ಮಾಡಿ ಮಾನವ ಹಕ್ಕುಗಳ ಆಯೋಗ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುವ ಸಾಧ್ಯತೆಯಿದೆ.


ಮಾನವ ಹಕ್ಕು ಆಯೋಗದ ಅಧಿಕಾರಿಗಳ ಭೇಟಿ ಹಿನ್ನಲೆಯಲ್ಲಿ ಸುತ್ತಮುತ್ತ ಪ್ರದೇಶಗಳಲ್ಲಿ ಪೊಲೀಸರು ತೀವ್ರ ಭದ್ರತೆ ಏರ್ಪಡಿಸಿದ್ದಾರೆ.


ಪಶುವೈದ್ಯೆ ಮೇಲೆ ಅತ್ಯಾಚಾರ ನಡೆದ ಟೊಂಡುಪಳ್ಳಿ ಟೋಲ್ ಗೇಟ್ ಸಮೀಪಕ್ಕೆ ಸಹ ತೆರಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com