ಹೇಳಲು ಏನೂ ಇಲ್ಲ, ಅತ್ಯಾಚಾರಿಗಳು ಮರಣದಂಡನೆಗೆ ಅರ್ಹರು: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಹೋದರ

ಇನ್ನು ಹೇಳಲು ಏನೂ ಇಲ್ಲ, ಅತ್ಯಾಚಾರಿಗಳು ಮರಣದಂಡನೆಗೆ ಅರ್ಹರು ಎಂದು ಅಸುನೀಗಿದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಹೋದರ ಹೇಳಿದ್ದಾರೆ. 

Published: 07th December 2019 11:52 AM  |   Last Updated: 07th December 2019 11:52 AM   |  A+A-


Nothing to say, rapists deserve death sentence says Unnao rape victim's brother

ಹೇಳಲು ಏನೂ ಇಲ್ಲ, ಅತ್ಯಾಚಾರಿಗಳು ಮರಣದಂಡನೆಗೆ ಅರ್ಹರು: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಹೋದರ

Posted By : Manjula VN
Source : ANI

ನವದೆಹಲಿ: ಇನ್ನು ಹೇಳಲು ಏನೂ ಇಲ್ಲ, ಅತ್ಯಾಚಾರಿಗಳು ಮರಣದಂಡನೆಗೆ ಅರ್ಹರು ಎಂದು ಅಸುನೀಗಿದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಹೋದರ ಹೇಳಿದ್ದಾರೆ. 

ಇದೀಗ ನನಗೆ ಹೇಳಲು ಏನೂ ಇಲ್ಲ. ನನ್ನ ಸಹೋದರಿ ಬದುಕಿಲ್ಲ. ಅತ್ಯಾಚಾರಿಗಳು ಮರಣದಂಡನೆಗೆ ಅರ್ಹರಷ್ಟೇ ಎಂದು ಹೇಳಇದ್ದಾರ. 

ನಮಗೆ ಜೀವ ಬೆದರಿಕೆ ಕರೆ ಬರುತ್ತಿವೆ. ನಮ್ಮ ಅಂಗಡಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸಂಬಂಧಿಕರೆಲ್ಲರಿಗೂ ಜೀವ ಬೆದರಿಕೆ ಕರೆ ಮಾಡುತ್ತಿದ್ದಾರೆ. ನಾವೆಲ್ಲರೂ ಆತಂಕದಲ್ಲಿ ಜೀವನ ನಡೆಸುತ್ತಿದ್ದೇವೆಂದು ಸಂತ್ರಸ್ತೆ ಕುಟುಂಬಸ್ಥರು ಹೇಳಿದ್ದಾರೆ. ಅಲ್ಲದೆ, ಭದ್ರತೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಐದು ಮಂದಿ ಕಾಮುಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಪ್ರಕರಣ ಸಂಬಂಧ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಕಾಮುಕರು ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದರು. ಶೇ.90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತೆ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಕೊನೆಯುಸಿರೆಳೆದಿದ್ದಾಳೆ. 

Stay up to date on all the latest ರಾಷ್ಟ್ರೀಯ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp