ಭಯೋತ್ಪಾದನೆಯನ್ನು ಪಾಕಿಸ್ತಾನ ತನ್ನ ದೇಶದ ನೀತಿಯಾಗಿಸಿದೆ: ರಾಜನಾಥ ಸಿಂಗ್ 

ಪಾಕಿಸ್ತಾನ ತನ್ನ ದುರ್ನಡತೆಯನ್ನು ಸರಿಪಡಿಸಿಕೊಳ್ಳುತ್ತಿಲ್ಲ, ಭಯೋತ್ಪಾದನೆಯನ್ನು ತನ್ನ ನೀತಿಯಾಗಿಸಿಕೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ. 
ಡೆಹ್ರಾಡೂನ್ ನಲ್ಲಿ ನಡೆದ ಭಾರತೀಯ ಸೇನಾ ಆಕಾಡೆಮಿ (ಐಎಂಎ)ಯ 142ನೇ ಪರೇಡ್ ನಲ್ಲಿ ಭಾಗವಹಿಸಿದ ರಾಜನಾಥ ಸಿಂಗ್
ಡೆಹ್ರಾಡೂನ್ ನಲ್ಲಿ ನಡೆದ ಭಾರತೀಯ ಸೇನಾ ಆಕಾಡೆಮಿ (ಐಎಂಎ)ಯ 142ನೇ ಪರೇಡ್ ನಲ್ಲಿ ಭಾಗವಹಿಸಿದ ರಾಜನಾಥ ಸಿಂಗ್

ಡೆಹ್ರಾಡೂನ್: ಪಾಕಿಸ್ತಾನ ತನ್ನ ದುರ್ನಡತೆಯನ್ನು ಸರಿಪಡಿಸಿಕೊಳ್ಳುತ್ತಿಲ್ಲ, ಭಯೋತ್ಪಾದನೆಯನ್ನು ತನ್ನ ನೀತಿಯಾಗಿಸಿಕೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ. 

ಡೆಹ್ರಾಡೂನ್ ನಲ್ಲಿ ನಡೆದ ಭಾರತೀಯ ಸೇನಾ ಆಕಾಡೆಮಿ (ಐಎಂಎ)ಯ 142ನೇ ಪರೇಡ್ ನಲ್ಲಿ ಭಾಗವಹಿಸಿದ ರಾಜನಾಥ ಸಿಂಗ್ ಅವರು ಪಾಕಿಸ್ತಾನದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 

ಭಯೋತ್ಪಾದನೆಯನ್ನು ಪಾಕಿಸ್ತಾನ ತನ್ನ ನೀತಿಯಾಗಿಸಿಕೊಂಡಿದೆ. ಆ ರಾಷ್ಟ್ರ ನಾಲ್ಕು ಯುದ್ಧವನ್ನು ಎದುರಿಸಿದ್ದು, ಎಲ್ಲದರಲ್ಲೂ ಸೋಲು ಕಂಡಿದೆ. ಆದರೂ, ತನ್ನ ದುರ್ನಡತೆಯನ್ನು ಸರಿಪಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಭಯೋತ್ಪಾದನೆಯನ್ನು ಎದುರಿಸಲು ಸಿದ್ಧವಾಗಿರಬೇಕಾಗಿದೆ ಎಂದು ಹೇಳಿದ್ದಾರೆ. 

ನನ್ನ ಕಣ್ಣಿನ ಎದುರಿಗೆ ನೀವು ನಡೆದಾಡುತ್ತಿರುವಾದ ದೇಶ ಸುರಕ್ಷಿತವಾಗಿರುವುದನ್ನು ನಿಮ್ಮಲ್ಲಿ ನೋಡುತ್ತೇನೆ. ಹಂತ ಹಂತವಾಗಿ ಹಾಗೂ ಭುಜದಿಂದ ಭುಜದವರೆಗೆ ನಡೆಯುವ ನಿಮ್ಮ ಸಾಮರ್ಥ್ಯು ಯಾವುದೇ ಪ್ರಮುಖ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ನಿಮ್ಮ ಈ ಸಾಮರ್ಥ್ಯವು ನಮ್ಮ ಸೈನೆ ಮತ್ತು ಸಶಸ್ತ್ರ ಪಡೆಗಳನ್ನು ಬಲಪಡಿಸುತ್ತದೆ. 

ಕೇಂದ್ರ ಸರ್ಕಾರ ಭಯೋತ್ಪಾದನೆ ವಿರುದ್ದ ಬಹುಮುಳಿ ತಂತ್ರಗಳನ್ನು ಅಳವಪಡಿಸಿಕೊಂಡಿದ್ದು, ಈ ತಂತ್ರಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ. 9/11 ಮಾಸ್ಟರ್ ಮೈಂಡ್ ಮತ್ತು ಅಲ್ ಖೈದಾ ಉಗ್ರ ಸಂಘಟನೆ ಎಲ್ಲಿಂದ ಬಂದಿತ್ತು ಎಂಬುದು ಇಡೀ ವಿಶ್ವಕ್ಕೇ ತಿಳಿದಿದೆ. ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯೇ 26/11 ದಾಳಿ ನಡೆಸಿದ್ದು ಯಾರು ಎಂಬುದು ಇಡಿ ವಿಶ್ವಕ್ಕೇ ತಿಳಿದಿದೆ. ಇವೆಲ್ಲದರ ನಡೆಯೂ ನಾವು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿದೆ. 26/11 ದಾಳಿಯಲ್ಲಿ ಸಾವನ್ನಪ್ಪಿದವರು ಹಾಗೂ ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡ ದುಃಖದಲ್ಲಿರುವವರಿಗೆ ದಾಳಿ ನಡೆದ ದಿನದಂದೇ ನ್ಯಾಯ ಸಿಕ್ಕಿಗೆ. ಶೀಘ್ರದಲ್ಲಿಯೇ ಈ ದಾಳಿಗಳಿಗೆ ಅಂತಿಮ ವಿದಾಯ ಹೇಳಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com