ಸಾಯುವ ಮುನ್ನ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಹೇಳಿದ್ದೇನು ಗೊತ್ತಾ?

ದುಷ್ಕರ್ಮಿಗಳು ಪೆಟ್ರೋಲ ಸುರಿದು ಹಚ್ಚಿದ ಬೆಂಕಿಯಲ್ಲಿ ಶೇ.90 ರಷ್ಟು ಬೆಂದು ಹೋಗಿದ್ದ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಹೃದಯಾಘಾತಕ್ಕೊಳಗಾಗಿ ಶುಕ್ರವಾರ ರಾತ್ರಿ ದೆಹಲಿಯ....
ಅತ್ಯಾಚಾರ ಸಂತ್ರಸ್ತೆ
ಅತ್ಯಾಚಾರ ಸಂತ್ರಸ್ತೆ

ನವದೆಹಲಿ: ದುಷ್ಕರ್ಮಿಗಳು ಪೆಟ್ರೋಲ ಸುರಿದು ಹಚ್ಚಿದ ಬೆಂಕಿಯಲ್ಲಿ ಶೇ.90 ರಷ್ಟು ಬೆಂದು ಹೋಗಿದ್ದ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಹೃದಯಾಘಾತಕ್ಕೊಳಗಾಗಿ ಶುಕ್ರವಾರ ರಾತ್ರಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಸಾಯುವ ಮುನ್ನ ಅತ್ಯಾಚಾರ ಸಂತ್ರಸ್ತೆ, ನಾನು ಬದುಕಬೇಕು.. ಯಾಕೆಂದರೆ ಆರೋಪಿಗಳನ್ನು ಗಲ್ಲಿಗೇರಿಸುವುದನ್ನು ಕಣ್ಣಾರೆ ನೋಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾಳೆ.

23 ವರ್ಷದ ಸಂತ್ರಸ್ತೆ ನನ್ನನ್ನು ಉಳಿಸಿ, ನಾನು ಬದುಕಬೇಕು. ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಬದುಕಲು ಬಿಡಲೇಬಾರದು. ಅವರನ್ನು ಗಲ್ಲಿಗೇರಿಸಬೇಕು. ಆರೋಪಿಗಳನ್ನು ಗಲ್ಲಿಗೇರಿಸುವುದನ್ನು ನಾನು ಕಣ್ಣಾರೆ ನೋಡಬೇಕು ಎಂದು ತನ್ನ ಕುಟುಂಬದ ಸದಸ್ಯರ ಮುಂದೆ ಮತ್ತು ವೈದ್ಯರ ಮುಂದೆ ಹೇಳಿಕೊಂಡಿದ್ದಾಳೆ. ಆದರೆ ಇದು ಸಂತ್ರಸ್ತೆಯ ಕೊನೆಯ ಮಾತಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಳು. ಇದೀಗ ಆಕೆಯ ತಂದೆ ಕೂಡಾ, ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಂದ ಆರೋಪಿಗಳನ್ನು ನೇಣಿಗೇರಿಸಬೇಕು ಇಲ್ಲವೇ ಹೈದರಾಬಾದ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಂತೆ ಕೊಲ್ಲಬೇಕು ಎಂದು

ಸುಟ್ಟ ಗಾಯಗಳಿಂದ ಅತೀವ ನೋವು ಅನುಭವಿಸುತ್ತಿದ್ದ ಯುವತಿ ತನ್ನನ್ನು ಉಳಿಸುವಂತೆ ಬೇಡಿಕೊಳ್ಳುತ್ತಿದ್ದಳು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ನ್ಯಾಯಾಲಯಕ್ಕೆ ಹೋಗುವ ಹಾದಿಯಲ್ಲಿ ಆಕೆಯ ಮೇಲೆ ಆರೋಪಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ಆಕೆಯನ್ನು ಲಖನೌದ ಶ್ಯಾಮ ಪ್ರಸಾದ್ ಮುಖರ್ಜಿ ಆಸ್ಪತ್ರೆಯಿಂದ ಏರ್ ಲಿಫ್ಟ್ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕರೆತರಲಾಗಿತ್ತು. ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ೧೧:೪೦ಕ್ಕೆ ಮೃತ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com