ಅತ್ಯಾಚಾರ ನಡೆದಿಲ್ವಲ್ಲ, ನಡೆದ ಮೇಲೆ ಬಾ! ದೂರು ಕೊಡಲು ಹೋದ ಮಹಿಳೆಯನ್ನು ಹೊರಕಳಿಸಿದ ಪೋಲೀಸರು

ಉನ್ನಾವೋದಲ್ಲಿ ಬೆಂಕಿಗಾಹುತಿಯಾದ ಅತ್ಯಾಚಾರ ಸಂತ್ರಸ್ಥೆ ಸಾವಿಗೀಡಾಗಿರುವ ಘಟನೆ ಕಣ್ಣೆದುರಿಗಿರುವಾಗಲೇ ಅದೇ ಪ್ರದೇಶದಲ್ಲಿ ಇನ್ನೊಂದು ಅಂತಹುದೇ ಘಟನೆ ವರದಿಯಾಗಿದೆ. ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉನ್ನಾವೋ(ಉತ್ತರ ಪ್ರದೇಶ): ಉನ್ನಾವೋದಲ್ಲಿ ಬೆಂಕಿಗಾಹುತಿಯಾದ ಅತ್ಯಾಚಾರ ಸಂತ್ರಸ್ಥೆ ಸಾವಿಗೀಡಾಗಿರುವ ಘಟನೆ ಕಣ್ಣೆದುರಿಗಿರುವಾಗಲೇ ಅದೇ ಪ್ರದೇಶದಲ್ಲಿ ಇನ್ನೊಂದು ಅಂತಹುದೇ ಘಟನೆ ವರದಿಯಾಗಿದೆ. ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ. ಅದಕ್ಕೂ ಹೆಚ್ಚಿನ ವಿಚಿತ್ರವೆಂದರೆ "ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ" ಮಹಿಳೆ ಪೋಲೀಸರಿಗೆ ದೂರು ಸಲ್ಲಿಸಲು ಹೋದ ವೇಳೆ ಪೋಲೀಸರು ಆಕೆಯ ದೂರು ಸ್ವೀಕರೈಸಲು ನಿರಾಕರಿಸಿದ್ದಲ್ಲದೆ "ಅರ್ತಾಚಾರ ನಡೆದ ಮೇಲೆ ಬಾ, ದೂರು ತೆಗೆದುಕೊಳ್ಳುತ್ತೇವೆ" ಎಂಬ ಉಡಾಫೆ ಉತ್ತರ ನೀಡಿದ್ದಾರೆ.

"ಅತ್ಯಾಚಾರವೇನೂ ನಡೆದಿಲ್ಲವಲ್ಲ, ಅದು ನಡೆದ ನಂತರ ಬನ್ನಿ" ಎಂಬುದಾಗಿ ಠಾಣೆಯಲ್ಲಿದ್ದ ಪೋಲೀಸ್ ಅಧಿಕಾರಿಯೊಬ್ಬ ಮಹಿಳೆಗೆ ಹೇಳಿದ್ದಾನೆ. 

ಕೆಲ ತಿಂಗಳ ಹಿಂದೆ ತಾನು ಔಷಧಿಗಳನ್ನು ಖರೀದಿಸಲು ತೆರಳುತ್ತಿದ್ದ ವೇಳೆ ಗ್ರಾಮ್ದ ಮೂವರು ಪುರುಷರು ನನ್ನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದರು. ಆದರೆ ಈ ಕುರಿತು ದೂರು ದಾಖಲಿಸಿಕೊಳ್ಳಲು ಪೋಲೀಸರು ನಿರಾಕರಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ. "ನಾನು ಔಷಧಿ ತೆಗೆದುಕೊಳ್ಳುವ ಸಲುವಾಗಿ ತೆರಳುತ್ತಿದ್ದೆ. ಆಗ ಮೂವರೂ ಪುರುಷರು ನನ್ನನ್ನು ಅಡ್ಡಗಟ್ಟಿ ಬಟ್ಟೆಗಳನ್ನು ಎಳೆಯಲು ಪ್ರಾರಂಭಿಸಿದರು. ಅವರು ನನ್ನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದರು"

ಮಹಿಳೆ ತನ್ನ ಮೇಲೆ ಎರಗಿದ್ದವರ ಗುರುತನ್ನೂ ಪತ್ತೆ ಮಾಡಿದ್ದಾಳೆ.ಆಕೆ ದೂರು ಸಲ್ಲಿಸಲು ತೆರಳಿದಾಗ "ನೀನೇನೂ ಅತ್ಯಾಚಾರಕ್ಕೆ ಒಳಗಾಗಿಲ್ಲ, ಅತ್ಯಾಚಾರ ನಡೆದ ಬಳಿಕ ಬಾ ಎಂದು ಹೇಳಿದ್ದಾರೆ.ತಾನು ಮೂರು ತಿಂಗಳಿನಿಂದ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದೇನೆ ಆದರೆ  ಯಾರೂ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.

"ಘಟನೆಯ ನಂತರ, ನಾನು 1090 (ಮಹಿಳಾ ಸಹಾಯವಾಣಿ) ಗೆ ಕರೆ ಮಾಡಿದೆ ಮತ್ತು ಅವರು ನನ್ನನ್ನು 100 ಡಯಲ್ ಮಾಡಲು ಕೇಳಿದರು. ಉನ್ನಾವೋ ಪೋಲೀಸರಿಗೆ ಮಾಹಿತಿ ನೀಡಲು ಹೇಳಿದ್ದಾರೆ. ಇದೀಗ ಮೂವರು ಆರೋಪಿಗಳು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ" ಮಹಿಳೆ ಆರೋಪಿಸಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com