ಮತ್ತಷ್ಟು‘ಎನ್‌ಕೌಂಟರ್‌’ಗಳಿಗೆ ತೆಲಂಗಾಣ ಪೊಲೀಸರಿಗೆ ಹೆಚ್ಚಾದ ಬೇಡಿಕೆ

ಪಶು ವೈದ್ಯೆ ಹತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನಾಲ್ವರು ಕಾಮುಕರನ್ನು  ಎನ್ ಕೌಂಟರ್ ಮಾಡಿದ ಬೆನ್ನಲ್ಲೇ,  ಅತ್ಯಾಚಾರಿಗಳಿಗೆ ಶಿಕ್ಷೆ ನೀಡಲು ಮತ್ತಷ್ಟು ಇಂತಹ ಕಾರ್ಯಾಚರಣೆ ಮಾಡುವಂತೆ ಜನರು ಬೇಡಿಕೆ ಇಡುತ್ತಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ
ವಿದ್ಯಾರ್ಥಿಗಳ ಪ್ರತಿಭಟನೆ

ಹೈದರಾಬಾದ್ : ಪಶು ವೈದ್ಯೆ ಹತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನಾಲ್ವರು ಕಾಮುಕರನ್ನು  ಎನ್ ಕೌಂಟರ್ ಮಾಡಿದ ಬೆನ್ನಲ್ಲೇ,  ಅತ್ಯಾಚಾರಿಗಳಿಗೆ ಶಿಕ್ಷೆ ನೀಡಲು ಮತ್ತಷ್ಟು ಇಂತಹ ಕಾರ್ಯಾಚರಣೆ ಮಾಡುವಂತೆ ಜನರು ಬೇಡಿಕೆ ಇಡುತ್ತಿದ್ದಾರೆ.

ಪೊಲೀಸರ ಕ್ರಮಕ್ಕೆ  ವಿವಿಧ ಕ್ಷೇತ್ರಗಳ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇತ್ತೀಚಿಗೆ ಸಂಭವಿಸಿದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲೂ ಆರೋಪಿಗಳಿಗೆ ಎನ್ ಕೌಂಟರ್ ಮಾಡುವ ಮೂಲಕ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ವಾರಂಗಲ್ ಜಿಲ್ಲೆಯ ಹನಮಕೊಂಡ  ಗ್ರಾಮದಲ್ಲಿನ ಯುವತಿ, ಯಾದಗಿರಿ ಜಿಲ್ಲೆಯ ಹಾಜಿಪುರದ ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಅಸಿಫಾಬಾದ್ ಜಿಲ್ಲೆಯ ಕುಮುರಾಮ್ ಭೀಮ್ ಜಿಲ್ಲೆಯ ದಲಿತ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಡಾಕ್ಟರ್ ಕೂಡಾ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಈ ಎಲ್ಲಾ ಪ್ರಕರಣಗಳನ್ನು ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕೆಂಬ ಬೇಡಿಕೆ ಕೇಳಿಬರುತ್ತಿದೆ. 

ಈ ಮೇಲಿನ ಪ್ರಕರಣಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ. ಇನ್ನಿತರ ಎರಡು ಪ್ರಕರಣಗಳು ಪ್ರಾಥಮಿಕ ಹಂತದ ವಿಚಾರಣೆಯಲ್ಲಿದೆ.  ಡಾಕ್ಟರ್ ಭಾಗಿಯಾದ ಪ್ರಕರಣದಲ್ಲಿ ಸಂತ್ರಸ್ಥೆ ದುರ್ಬಲ ಜಾತಿಗೆ ಸೇರಿದ್ದು, ಪೊಲೀಸರು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ಪ್ರಕರಣಗಳಲ್ಲಿ ಸಂತ್ರಸ್ಥೆಯರು ಆರ್ಥಿಕವಾಗಿ ದುರ್ಬಲ ಜಾತಿಗೆ ಸೇರಿದ್ದರೆ ಉಳಿದ ಎರಡು ಪ್ರಕರಣಗಳ ಸಂತ್ರಸ್ಥೆಯರು ಉನ್ನತ ಜಾತಿ ಹಾಗೂ ಉತ್ತಮ ವಿದ್ಯಾಭ್ಯಾಸ ಮಾಡಿದವರಾಗಿದ್ದಾರೆ.  ರಾಜಕಾರಣಿಗಳು, ಸೆಲೆಬ್ರಿಟಿಗಳು ಸಂತ್ರಸ್ಥೆಯರ ಕುಟುಂಬಗಳಿಗೆ ಭೇಟಿ ನೀಡುತ್ತಿದ್ದು, ಸಾಂತ್ವನ ಹೇಳುತ್ತಿದ್ದಾರೆ. ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com