ಮಾಜಿ ಸಚಿವ ಅರುಣ್ ಶೌರಿ ಆರೋಗ್ಯ ವಿಚಾರಿಸಿದ ಪ್ರಧಾನಿ: ಮೋದಿ ನಡೆಗೆ ಮೆಚ್ಚುಗೆಯ ಮಹಾಪೂರ  

ಪ್ರಧಾನಿ ನರೇಂದ್ರ ಮೋದಿ ಅನಾರೋಗ್ಯ ಎದುರಿಸುತ್ತಿರುವ ಅರುಣ್ ಶೌರಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. 
ಮಾಜಿ ಸಚಿವ ಅರುಣ್ ಶೌರಿ ಆರೋಗ್ಯ ವಿಚಾರಿಸಿದ ಪ್ರಧಾನಿ: ಮೋದಿ ನಡೆಗೆ ಮೆಚ್ಚುಗೆಯ ಮಹಾಪೂರ
ಮಾಜಿ ಸಚಿವ ಅರುಣ್ ಶೌರಿ ಆರೋಗ್ಯ ವಿಚಾರಿಸಿದ ಪ್ರಧಾನಿ: ಮೋದಿ ನಡೆಗೆ ಮೆಚ್ಚುಗೆಯ ಮಹಾಪೂರ

ಪುಣೆ: ಪ್ರಧಾನಿ ನರೇಂದ್ರ ಮೋದಿ ಅನಾರೋಗ್ಯ ಎದುರಿಸುತ್ತಿರುವ ಅರುಣ್ ಶೌರಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. 

ಅರುಣ್ ಶೌರಿ ತಮ್ಮ ಬಂಗಲೆಯ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದರು, ಅವರಿಗೆ ಪುಣೆಯ ಹಾಲ್ ಕ್ಲಿನಿಕ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅರುಣ್ ಶೌರಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. 

ಅರುಣ್ ಶೌರಿ ಅವರ ಆರೋಗ್ಯ ವಿಚಾರಿಸಿದ್ದೇನೆ, ಅವರೊಂದುಗೆ ಅದ್ಭುತ ಸಂವಾದವಾಯಿತು. ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ. 

ತಮ್ಮ ಕಡುಟೀಕಾಕಾರರಾಗಿದ್ದ ಅರುಣ್ ಶೌರಿ ಅವರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ಅರುಣ್ ಶೌರಿ ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com