ಕೈದಿಗಳಿಗೆ ಹಸುಗಳನ್ನು ಸಾಕುವ ಕೆಲಸ ನೀಡಿದರೆ ಅವರ ಅಪರಾಧಿ ಮನೋಸ್ಥಿತಿ ಕಡಿಮೆಯಾಗುತ್ತದೆ: ಮೋಹನ್ ಭಾಗವತ್ 

ಜೈಲು ಕೈದಿಗಳಿಗೆ ಹಸುಗಳನ್ನು ನೋಡಿಕೊಳ್ಳುವ ಕೆಲಸವನ್ನು ನೀಡಿದರೆ ಅವರ ಅಪರಾಧಿ ಮನೋಭಾವ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಮೋಹನ್ ಭಾಗವತ್
ಮೋಹನ್ ಭಾಗವತ್

ಪುಣೆ; ಜೈಲು ಕೈದಿಗಳಿಗೆ ಹಸುಗಳನ್ನು ನೋಡಿಕೊಳ್ಳುವ ಕೆಲಸವನ್ನು ನೀಡಿದರೆ ಅವರ ಅಪರಾಧಿ ಮನೋಭಾವ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಇಂತಹ ಅವಲೋಕನ ಮತ್ತು ಸಂಶೋಧನೆಗಳನ್ನು ದಾಖಲೀಕರಣಗೊಳಿಸಬೇಕು, ಗೋಮಾತೆಯ ಗುಣಗಳನ್ನು ಜಗತ್ತಿಗೆ ತೋರಿಸಬೇಕು ಎಂದರು.


ಗೊ-ವಿಜ್ಞಾನ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ಗೋವು ಅಥವಾ ಹಸು ಈ ಜಗತ್ತಿಗೆ ತಾಯಿ, ಇದು ಮಣ್ಣನ್ನು ಪೋಷಿಸುತ್ತದೆ, ಇದು ಪ್ರಾಣಿಗಳನ್ನು, ಪಕ್ಷಿಗಳನ್ನು ಪೋಷಿಸುತ್ತದೆ ಮತ್ತು ಮನುಷ್ಯರನ್ನು ಪೋಷಿಸುತ್ತದೆ ಮತ್ತು ರೋಗಗಳಿಂದ ರಕ್ಷಿಸುತ್ತದೆ, ಮಾನವ ಹೃದಯವನ್ನು ಹೂವಿನಂತೆ ಕೋಮಲಗೊಳಿಸುತ್ತದೆ ಎಂದರು.


ಜೈಲುಗಳಲ್ಲಿ ಹಸುಗಳ ಕೊಟ್ಟಿಗೆಯನ್ನು ಸ್ಥಾಪಿಸಿ ಕೈದಿಗಳು ಹಸುಗಳನ್ನು ಸಾಕಲು ಪ್ರಾರಂಭಿಸಿದಾಗ ಕೈದಿಗಳ ಅಪರಾಧ ಮನೋಸ್ಥಿತಿ ಕ್ಷೀಣಿಸಲು ಪ್ರಾರಂಭವಾಗುವುದನ್ನು ಜೈಲಿನ ಅಧಿಕಾರಿಗಳು ಗಮನಿಸಿದ್ದಾರೆ. ಕೆಲವು ಜೈಲು ಅಧಿಕಾರಿಗಳು ಹಂಚಿಕೊಂಡ ಅನುಭವಗಳಿಂದ ನಾನು ಇದನ್ನು ನಿಮಗೆ ಹೇಳುತ್ತಿದ್ದೇನೆ ಎಂದರು.


ಹಸುವಿನ ಗುಣಗಳನ್ನು ಜಗತ್ತಿಗೆ ಸಾಬೀತುಪಡಿಸಲು ಅದನ್ನು ದಾಖಲೆಗಳಲ್ಲಿ ಬರೆದಿಡಲು ಪ್ರಾರಂಭಿಸಬೇಕು, ಕೈದಿಗಳ ಮೇಲೆ ಮಾನಸಿಕ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ, ಮತ್ತು ನಿರ್ದಿಷ್ಟ ಸಮಯದವರೆಗೆ ಹಸುಗಳನ್ನು ಸಾಕಿದ ನಂತರ ಕೈದಿಗಳಲ್ಲಿ ಆಗುವ ಬದಲಾವಣೆಗಳನ್ನು ನಿರ್ಧರಿಸಬೇಕು. ಸಂಶೋಧನೆಗಳನ್ನು ವಿವಿಧ ಸ್ಥಳಗಳಿಂದ ಪಡೆಯಬೇಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com