ಜವಹರ್ ಲಾಲ್ ನೆಹರು ಅತಿ ದೊಡ್ಡ ರೇಪಿಸ್ಟ್ : ಸಾದ್ವಿ ಪ್ರಾಚಿ

 ದೇಶದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ದೇಶದ ಅತಿ ದೊಡ್ಡ ಅತ್ಯಾಚಾರಿ ಎಂದು   ವಿಶ್ವ ಹಿಂದೂ ಪರಿಷತ್ ನಾಯಕಿ  ಸಾದ್ವಿ ಪ್ರಾಚಿ ಹೇಳಿದ್ದಾರೆ.
ಸಾದ್ವಿ ಪ್ರಾಚಿ
ಸಾದ್ವಿ ಪ್ರಾಚಿ

ಮೀರತ್:  ದೇಶದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ದೇಶದ ಅತಿ ದೊಡ್ಡ ಅತ್ಯಾಚಾರಿ ಎಂದು   ವಿಶ್ವ ಹಿಂದೂ ಪರಿಷತ್ ನಾಯಕಿ  ಸಾದ್ವಿ ಪ್ರಾಚಿ ಹೇಳಿದ್ದಾರೆ.

ಭಾರತವು ಅತ್ಯಾಚಾರಗಳ ರಾಜಧಾನಿ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾದ್ವಿ ಪ್ರಾಚಿ, ರಾಮ, ಕೃಷ್ಣ ಇದ್ದ ದೇಶ ನಮ್ಮದು,  ರಾಹುಲ್ ಗಾಂಧಿ ಹೇಳಿರುವುದಾದರೂ ಏನು, ರಾಮ ಮತ್ತು ಕೃಷ್ಣನ ಪರಮಾತ್ಮ ಇದ್ದ ದೇಶದ ಸಂಸ್ಕೃತಿ ಹಾಳು ಮಾಡಿದ್ದೇ ನೆಹರು, ನೆಹರು ದೇಶದ ಅತಿ ದೊಡ್ಡ ರೇಪಿಸ್ಟ್ ಎಂದು ಹೇಳಿದ್ದಾರೆ.

ಭಯೋತ್ಪಾದನೆ, ನಕ್ಸಲಿಸಂ, ಭ್ರಷ್ಟಾಚಾರ ಹಾಗೂ ಅತ್ಯಾಚಾರ ನೆಹರು ಕುಟುಂಬದಿಂದ ಬಂದ ಉಡುಗೊರೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com