ಪೌರತ್ವ(ತಿದ್ದುಪಡಿ)ಮಸೂದೆ ಪ್ರತಿಯನ್ನು ಹರಿದುಹಾಕಿದ ಅಸಾದುದ್ದೀನ್ ಓವೈಸಿ

ಪೌರತ್ವ(ತಿದ್ದುಪಡಿ)ಮಸೂದೆ ಮೇಲೆ ಲೋಕಸಭೆಯಲ್ಲಿ ಚರ್ಚೆ ಕಾವು ಏರಿದ್ದು, ಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅನಾಕರಿಕ ವರ್ತನೆ ತೋರಿದ್ದಾರೆ. 
ಪೌರತ್ವ(ತಿದ್ದುಪಡಿ)ಮಸೂದೆ ಪ್ರತಿಯನ್ನು ಹರಿದುಹಾಕಿದ ಅಸಾದುದ್ದೀನ್ ಓವೈಸಿ
ಪೌರತ್ವ(ತಿದ್ದುಪಡಿ)ಮಸೂದೆ ಪ್ರತಿಯನ್ನು ಹರಿದುಹಾಕಿದ ಅಸಾದುದ್ದೀನ್ ಓವೈಸಿ

ನವದೆಹಲಿ: ಪೌರತ್ವ(ತಿದ್ದುಪಡಿ)ಮಸೂದೆ ಮೇಲೆ ಲೋಕಸಭೆಯಲ್ಲಿ ಚರ್ಚೆ ಕಾವು ಏರಿದ್ದು, ಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅನಾಕರಿಕ ವರ್ತನೆ ತೋರಿದ್ದಾರೆ. 

ಮಸೂದೆಯನ್ನು ವಿರೋಧಿಸಿ ಅಸಾದುದ್ದೀನ್ ಓವೈಸಿ ಮಸೂದೆಯ ಪ್ರತಿಯನ್ನು ಹರಿದು ಹಾಕಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಮತ್ತೊಂದು ವಿಭಜನೆಯಾಗುತ್ತಿದೆ. ಈ ಮಸೂದೆ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಹಾಗೂ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧವಾದದ್ದಾಗಿದೆ. ದೇಶವನ್ನು ವಿಭಜನೆ ಮಾಡುವ ಈ ಮಸೂದೆಯನ್ನು ಹರಿದು ಹಾಕುತ್ತೇನೆ ಎಂದು ಓವೈಸಿ ಹೇಳಿದ್ದಾರೆ. 

ಇದೇ ವೇಳೆ ತೃಣಮೂಲ ಕಾಂಗ್ರೆಸ್ ನ ಅಭಿಷೇಕ್ ಬ್ಯಾನರ್ಜಿ ಸಹ ವಿರೋಧ ವ್ಯಕ್ತಪಡಿಸಿದ್ದು, ಸ್ವಾಮಿ ವಿವೇಕಾನಂದರು ಇದ್ದಿದ್ದರೆ ಅವರ ಭಾರತದ ಕಲ್ಪನೆಗೆ ವಿರುದ್ಧವಾಗಿರುವ ಮಸೂದೆಯನ್ನು ಕಂಡು  ಆಘಾತಕ್ಕೊಳಗಾಗುತ್ತಿದ್ದರು. ಮಹಾತ್ಮಾ ಗಾಂಧಿ ಅವರ ಹೇಳಿಕೆಗಳನ್ನು ನಿರ್ಲಕ್ಷಿಸಿದರೆ ಹಾನಿಕಾರಕ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com