ಅಯೋಧ್ಯೆ ತೀರ್ಪು: ಹಿಂದೂ ಮಹಾಸಭಾದಿಂದ 'ಸುಪ್ರೀಂ'ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಕೆ

ಅಯೋಧ್ಯೆಯಲ್ಲಿ ರಾಮ ಜನಭೂಮಿ-ಬಾಬರಿ ಮಸೀದಿ ನಿವೇಶನ ವಿವಾದ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಿಂದೂ ಮಹಾ ಸಭಾ ಮರು ಪರಿಶೀಲನಾ ಅರ್ಜಿಯನ್ನು ಸೋಮವಾರ ಸಲ್ಲಿಸಿದೆ.
ಹಿಂದೂ ಮುಸ್ಲಿಂರ ಸಂಭ್ರಮ
ಹಿಂದೂ ಮುಸ್ಲಿಂರ ಸಂಭ್ರಮ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಜನಭೂಮಿ-ಬಾಬರಿ ಮಸೀದಿ ನಿವೇಶನ ವಿವಾದ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಿಂದೂ ಮಹಾ ಸಭಾ ಮರು ಪರಿಶೀಲನಾ ಅರ್ಜಿಯನ್ನು ಸೋಮವಾರ ಸಲ್ಲಿಸಿದೆ. 

ಇದರೊಂದಿಗೆ  ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ 7 ಅರ್ಜಿಗಳು ದಾಖಲಾದಂತಾಗಿದೆ. ಮುಸ್ಲಿಮರು ಈವರೆಗೆ ಆರು ಮರು ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದಾರೆ. 

ಹಿಂದೂಗಳ  ಕಡೆಯಿಂದ  ಸಲ್ಲಿಸಲಾದ ಮೊದಲ  ಮರು ಪರಿಶೀಲನಾ ಅರ್ಜಿ ಇದಾಗಿದೆ. ಮುಸ್ಲಿಮರಿಗೆ ಅಯೋಧ್ಯೆಯ ಪ್ರಮುಖ ಪ್ರದೇಶದಲ್ಲಿ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಭೂಮಿಯನ್ನು ಮಂಜೂರು ಮಾಡಬೇಕು ಎಂಬ ಸುಪ್ರೀಂ ಕೋರ್ಟ್  ತೀರ್ಪನ್ನು ಪ್ರಶ್ನಿಸಿ ಹಿಂದೂ ಮಹಾಸಭಾ ಅರ್ಜಿ ಸಲ್ಲಿಸಿದೆ. 

ಡಿಸೆಂಬರ್ 2ರಂದು ಉತ್ತರ ಪ್ರದೇಶದ ಜಾಮಿಯತ್  ಉಲಾಮಾ? ಎ- ಹಿಂದ್ ಅಧ್ಯಕ್ಷ ಸಯ್ಯದ್ ಅಷ್ಪದ್ ರಷೀದಿ ಅವರು ಮೊದಲ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು. 

ಸುಪ್ರೀಂ ಕೋರ್ಟ್ ನ ಈ ಹಿಂದಿನ  ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ವಿವಾದಗ್ರಸ್ಥ  2.77 ಎಕರೆ ಜಮೀನಿನಲ್ಲಿ ಕೇಂದ್ರ ಸರ್ಕಾರ ನೇಮಿಸಲಿರುವ ಟ್ರಸ್ಟ್ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಿಸಬೇಕು ಮತ್ತು ಅಯೋಧ್ಯೆಯ ಪ್ರಮುಖ ಪ್ರದೇಶದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ 5 ಎಕರೆ ಭೂಮಿಯನ್ನು ಮಂಜೂರು ಮಾಡಬೇಕು ಎಂದು ತೀರ್ಪು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com