ಪೌರತ್ವ ತಿದ್ದುಪಡಿ ಮಸೂದೆ: ಈಶಾನ್ಯ ರಾಜ್ಯಗಳ ರಕ್ಷಣೆ, ಅಲ್ಲಿ ಈ ಹೊಸ ಕಾನೂನು ಅನ್ವಯಿಸುವುದಿಲ್ಲ: ಅಮಿತ್ ಶಾ

ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದೊಂದಿಗೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Published: 09th December 2019 06:44 PM  |   Last Updated: 09th December 2019 06:44 PM   |  A+A-


Amit shah

ಅಮಿತ್ ಶಾ

Posted By : Vishwanath S
Source : PTI

ನವದೆಹಲಿ: ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದೊಂದಿಗೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಬಿಜೆಪಿ ನೇತೃತ್ವದ ಸರ್ಕಾರವು ಸಂವಿಧಾನದ ಆರನೇ ವೇಳಾಪಟ್ಟಿಯಲ್ಲಿರುವ ಪ್ರದೇಶದ ಕೆಲವು ಭಾಗಗಳಿಗೆ ವಿನಾಯಿತಿ ನೀಡಲು ನಿರ್ಧರಿಸಿಲಾಗಿದೆ. ಅದರಂತೆ ಇದು ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂನಲ್ಲಿ ಸ್ವಾಯತ್ತ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಿಗೆ ವಿನಾಯ್ತಿ ನೀಡಿದೆ.

ಆಂತರಿಕ ಸಾಲಿನ ಪರವಾನಗಿ ಹೊಂದಿರುವ ರಾಜ್ಯಗಳಾದ(ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ) ಈ ಮಸೂದೆ ಅನ್ವಯಿಸುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳ ಜನರ ಆತಂಕವನ್ನು ನೀಗಿಸಲು ಪ್ರಯತ್ನಿಸಿದ ಶಾ, ನರೇಂದ್ರ ಮೋದಿ ಸರ್ಕಾರವು ಈ ಪ್ರದೇಶದ ಜನರ ಪದ್ಧತಿ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಬದ್ಧವಾಗಿದೆ ಮತ್ತು ಮಣಿಪುರವನ್ನು ಇನ್ನರ್ ಲೈನ್ ಪರ್ಮಿಟ್ ಆಡಳಿತದ ಅಡಿಯಲ್ಲಿ ತರಲಾಗುವುದು ಎಂದರು.

ನಮ್ಮ ದೇಶದ ಕಾನೂನಿನ ಪ್ರಕಾರ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಮುಸ್ಲಿಂಯೇತರರು ನಾಗರಿಕತ್ವಕ್ಕೆ ಅರ್ಜಿ ಹಾಕಿದರೆ ನಾವು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಧಾರ್ಮಿಕ ಕಿರುಕುಳ ಅನುಭವಿಸದ ವ್ಯಕ್ತಿ ಈ ತಿದ್ದುಪಡಿಯಿಂದ ಪ್ರಯೋಜನ ಪಡೆಯುವುದಿಲ್ಲ ಎಂದರು.

ಪೌರತ್ವ(ತಿದ್ದುಪಡಿ)ಮಸೂದೆಯನ್ನು ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದರು. ನಂತರ ಮತಕ್ಕೆ ಹಾಕಲಾಗಿತ್ತು. ಮಸೂದೆ ಪರವಾಗಿ 293 ಸದಸ್ಯರು ಮತ ಹಾಕಿದರೆ ವಿರುದ್ಧವಾಗಿ 82 ಮತಗಳು ಬಿದ್ದವು. ಇದರೊಂದಿಗೆ ಮಸೂದೆಗೆ ಅಂಗೀಕಾರ ಸಿಕ್ಕಿದೆ.

Stay up to date on all the latest ರಾಷ್ಟ್ರೀಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp