ವಯೋಲಿನ್ ವಾದಕ ಬಾಲ ಭಾಸ್ಕರ್ ಕಾರು ಅಪಘಾತ ಪ್ರಕರಣ ಸಿಬಿಐಗೆ  ಹಸ್ತಾಂತರ

ರಸ್ತೆ ಅಪಘಾತದಲ್ಲಿ ಮೃತಪಟ್ಟ  ವಯೋಲಿನ್ ವಾದಕ ಬಾಲ ಭಾಸ್ಕರ್ ಮತ್ತು ಅವರ 2 ವರ್ಷದ ಪುತ್ರಿ ತೇಜಸ್ವಿನಿ ಬಾಲಾ ಪ್ರಕರಣನ್ನು ಕೇರಳ ಸರ್ಕಾರ ಸಿಬಿಐಗೆ ಹಸ್ತಾಂತರಿಸಿದೆ.
ಬಾಲ ಭಾಸ್ಕರ್
ಬಾಲ ಭಾಸ್ಕರ್

ತಿರುವನಂತಪುರ: ರಸ್ತೆ ಅಪಘಾತದಲ್ಲಿ ಮೃತಪಟ್ಟ  ವಯೋಲಿನ್ ವಾದಕ ಬಾಲ ಭಾಸ್ಕರ್ ಮತ್ತು ಅವರ 2 ವರ್ಷದ ಪುತ್ರಿ ತೇಜಸ್ವಿನಿ ಬಾಲಾ ಪ್ರಕರಣನ್ನು ಕೇರಳ ಸರ್ಕಾರ ಸಿಬಿಐಗೆ ಹಸ್ತಾಂತರಿಸಿದೆ.

ತಮ್ಮ ಪುತ್ರನ  ಕಾರು ಅಪಘಾತ ಪ್ರಕರಣ ಸಹಜವಾದದಲ್ಲ ಯಾರದ್ದೋ ಕೈವಾಡವಿದೆ, ಹೀಗಾಗಿ ಈ ಕೇಸ್ ಅನ್ನು ಸಿಬಿಐ ಗೆ ವಹಿಸಬೇಕೆಂದು ಬಾಲಭಾಸ್ಕರ್ ಅವರ ತಂದೆ ಸಿಆರ್ ಉನ್ನಿ ಮನವಿ ಮಾಡಿದ್ದರು.

ಉನ್ನಿ ಅವರ ಮನವಿಯ ಮೇರೆಗೆ ಕೇರಳ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ನಿರ್ಧರಿಸಿದೆ.  ಸೆಪ್ಟೆಂಬರ್ 25, 2018ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಭಾಸ್ಕರ್ ಅವರ ಎರಡು ವರ್ಷದ ಪುತ್ರಿ ತೇಜಸ್ವಿನಿ ಮೃತಪಟ್ಟಿದ್ದಳು.

ತ್ರಿಶ್ಶೂರಿನ ದೇವಸ್ಥಾನವೊಂದಕ್ಕೆ ತೆರಳಿ ಪೂಜೆ ಸಲ್ಲಿಸಿ ಭಾಸ್ಕರ್ ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಆಗ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆಯಿತು. ಭಾಸ್ಕರ್ ಅವರ ಸ್ನೇಹಿತ ಅರ್ಜುನ್ ಕಾರು ಚಾಲನೆ ಮಾಡುತ್ತಿದ್ದರು. ಅವರೂ ಕೂಡ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com