ಬನಾರಸ್ ಹಿಂದೂ ವಿವಿ ಪ್ರೊಫೆಸರ್ ಫೈರೋಜ್ ಖಾನ್ ರಾಜಿನಾಮೆ 

 ಬನಾರಸ್ ಹಿಂದೂ ವಿಶ್ವವಿದ್ಯಾಲಯ ಫ್ರೊಫೆಸರ್ ಫೈರೋಜ್ ಖಾನ್ ರಾಜಿನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೈರೋಜ್ ಖಾನ್
ಫೈರೋಜ್ ಖಾನ್

ವಾರಣಾಸಿ:  ಬನಾರಸ್ ಹಿಂದೂ ವಿಶ್ವವಿದ್ಯಾಲಯ ಫ್ರೊಫೆಸರ್ ಫೈರೋಜ್ ಖಾನ್ ರಾಜಿನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬನಾರಸ್ ಹಿಂದು ವಿಶ್ವವಿದ್ಯಾಲಯದ ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ್​ ಕಾಲೇಜಿನ ಸಂಸ್ಕೃತ ವಿಭಾಗಕ್ಕೆ ಮುಸ್ಲಿಂ ​ ಪ್ರೊಫೆಸರ್ ನೇಮಕ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವಿದ್ಯಾರ್ಥಿಗಳ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್​ ಕೂಡ ಬೆಂಬಲಿಸಿದೆ, 

ಡಾ. ಫಿರೋಜ್​ ಖಾನ್​ ಅವರನ್ನು ಸಂಸ್ಕೃತ ವಿಭಾಗಕ್ಕೆ ಅಸಿಸ್ಟೆಂಟ್​ ಪ್ರೊಫೆಸರ್​ ಆಗಿ ನವಂಬರ್​ 5ರಂದು ನೇಮಕ ಮಾಡಲಾಗಿತ್ತು.  ಆದರೆ ಸಂಸ್ಕೃತ ವನ್ನು ಹಿಂದೂ ಪ್ರೊಫೆಸರ್ ಮಾತ್ರ ಹೇಳಿಕೊಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದರು. 

ಬಿಎಚ್ ಯು ಪ್ರೊಫೆಸರ್ ಅವರಿಗೆ ಬೆಂಬಲ ನೀಡಿದ್ದರೂ ಹಲವು ದಿನಗಳಿಂದ ಈ ವಿಭಾಗದಲ್ಲಿ ಪಾಠ ಪ್ರವಚನಗಳು ನಡೆಯುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com