ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಬೆಂಬಲ, ಜಿಡಿಯು ಪಕ್ಷದೊಳಗೆ ಭುಗಿಲೆದ್ದ ವಿರೋಧ

ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು  ಬೆಂಬಲಿಸುವುದರ ವಿರುದ್ಧ ಜೆಡಿಯು ಪಕ್ಷದೊಳಗೆ  ವಿರೋಧಗಳು ಕೇಳಿಬರುತ್ತಿವೆ. 
ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಬೆಂಬಲ, ಜಿಡಿಯು ಪಕ್ಷದೊಳಗೆ ಭುಗಿಲೆದ್ದ ವಿರೋಧ
ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಬೆಂಬಲ, ಜಿಡಿಯು ಪಕ್ಷದೊಳಗೆ ಭುಗಿಲೆದ್ದ ವಿರೋಧ

ಪಾಟ್ನಾ: ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವುದರ ವಿರುದ್ಧ ಜೆಡಿಯು ಪಕ್ಷದೊಳಗೆ  ವಿರೋಧಗಳು ಕೇಳಿಬರುತ್ತಿವೆ. 

ಪಕ್ಷದ ಉಪಾಧ್ಯಕ್ಷ ಹಾಗೂ ಚುನಾವಣಾ ವ್ಯೂಹ ತಜ್ಞ ಪ್ರಶಾಂತ್ ಕಿಶೋರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಷ್ಟ್ರೀಯ ವಕ್ತಾರ ಪವನ್ ಕೆ ವರ್ಮಾ ಅವರೂ ಸಹ ವಿರೋಧ ಹೊರ ಹಾಕಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆಗೆ ನೀಡಿರುವ ಬೆಂಬಲದ  ಬಗ್ಗೆ ಪುನರ್ ಆಲೋಚನೆ ಮಾಡುವಂತೆ ಜೆಡಿಯು ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ವರ್ಮಾ ಸಲಹೆ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವ ಬಗ್ಗೆ ನಿತೀಶ್ ಕುಮಾರ್ ಮತ್ತೊಮ್ಮೆ  ಆಲೋಚಿಸಬೇಕೆಂದು ಅವರು  ಕೋರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com