ಉಪ ಸಮರದಲ್ಲಿ ಅನರ್ಹರಿಗೆ ಗೆಲುವು; 'ಭಾರತ ಸ್ವರ್ಗ' ಎಂದ ಚಿದಂಬರಂ ಹೇಳಿದ್ದೇನು?

ಅನರ್ಹ ಶಾಸಕರು ಮತ್ತು ಹಾಲಿ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿದ್ದ ಕರ್ನಾಟಕ ಉಪ ಚುನಾವಣಾ ಫಲಿತಾಂಶ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅನರ್ಹ ಶಾಸಕರು ಮತ್ತು ಹಾಲಿ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿದ್ದ ಕರ್ನಾಟಕ ಉಪ ಚುನಾವಣಾ ಫಲಿತಾಂಶ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದೆ.

ಹೌದು.. ರಾಷ್ಟ್ರಮಟ್ಟದಲ್ಲಿ ಕುತೂಹಲ ಮೂಡಿಸಿದ್ದ ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದು, ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದವರಲ್ಲಿ ಇಬ್ಬರನ್ನು(ಎಂಟಿಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್) ಹೊರತುಪಡಿಸಿ ಉಳಿದವರೆಲ್ಲ ಗೆದ್ದಿದ್ದಾರೆ. ಅನರ್ಹರಾಗಿದ್ದ ಶಾಸಕರೆಲ್ಲರೂ ಹೀನಾಯವಾಗಿ ಸೋಲುತ್ತಾರೆ ಎಂದು ನಿರೀಕ್ಷಿಸಿದ್ದ ಕಾಂಗ್ರೆಸ್​ ಲೆಕ್ಕಾಚಾರ ಪೂರ್ತಿ ಉಲ್ಟಾ ಹೊಡೆದಿದ್ದು, ಬಿಎಸ್ ವೈ ಸರ್ಕಾರ ಸೇಫ್ ಆಗಿದೆ.

ಕರ್ನಾಟಕದಲ್ಲಿ ಬಿಜೆಪಿ 12 ಕ್ಷೇತ್ರಗಳನ್ನು ಗೆದ್ದು, ಕಾಂಗ್ರೆಸ್ ಹೀನಾಯವಾಗಿ ಸೋತಿದ್ದರ ಬಗ್ಗೆ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್​ ಹಿರಿಯ ನಾಯಕ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, ಭಾರತ ಸ್ವರ್ಗ ಎಂದು ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ.

'ಓರ್ವ ಅಭ್ಯರ್ಥಿ ಕಾಂಗ್ರೆಸ್​ನಲ್ಲಿದ್ದಾಗ ಮತದಾರರು ಅವನಿಗೆ ಮತ ಹಾಕಿ ಗೆಲ್ಲಿಸುತ್ತಾರೆ. ಅದೇ ಅಭ್ಯರ್ಥಿ ಬಿಜೆಪಿಗೆ ಪಕ್ಷಾಂತರಗೊಂಡು ಸ್ಪರ್ಧಿಸಿದರೆ ಆಗಲೂ ಮತದಾರರು ಅವನನ್ನೇ ಗೆಲ್ಲಿಸುತ್ತಾರೆ. ಹೀಗಿರುವಾಗ ಭಾರತದ ರಾಜಕಾರಣ ಒಂದು ಅತ್ಯುತ್ಕೃಷ್ಟತೆಯನ್ನು ಹೊಂದಿದೆ ಹಾಗೂ ಅದಕ್ಕೊಂದು ಆಕಾರವೇ ಇಲ್ಲ ಎಂದು ಹೇಳಬಹುದಲ್ಲವೇ? ಇದೇ ಕಾರಣಕ್ಕೇ ಭಾರತ ಸ್ವರ್ಗಕ್ಕೆ(India=Heaven) ಸಮ ಎಂದು ಪಿ.ಚಿದಂಬರಂ ಅವರು ಟ್ವೀಟ್​ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com