ಎಸ್. ಸಿ/ಎಸ್ .ಟಿಗೆ 10 ವರ್ಷ ಮೀಸಲಾತಿ ವಿಸ್ತರಿಸುವ ಮಸೂದೆ-ಲೋಕಸಭೆಯಲ್ಲಿ ಅಂಗೀಕಾರ

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮತ್ತೆ 10 ವರ್ಷಗಳ ಕಾಲ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿಯನ್ನು ವಿಸ್ತರಿಸುವ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿಂದು ಅನುಮೋದನೆ ಪಡೆದುಕೊಂಡಿದೆ.
ಸಂಸತ್
ಸಂಸತ್

ನವ ದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮತ್ತೆ 10 ವರ್ಷಗಳ ಕಾಲ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿಯನ್ನು ವಿಸ್ತರಿಸುವ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿಂದು ಅನುಮೋದನೆ ಪಡೆದುಕೊಂಡಿದೆ.

ಉಭಯ ಸಮುದಾಯದಲ್ಲೂ ಹೊಸ ರಾಜಕೀಯ ನಾಯಕರ ಬೆಳವಣಿಗೆ ಹಿನ್ನೆಲೆಯಲ್ಲಿ ಮೀಸಲಾತಿ ಅಗತ್ಯವಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಸೂದೆಯನ್ನು ಸಮರ್ಥಿಸಿಕೊಂಡರು.

ಮಸೂದೆ ಪರವಾಗಿ 352 ಸದಸ್ಯರು ಮತ ಚಲಾಯಿಸಿದ್ದರೆ ವಿರುದ್ಧವಾಗಿ ಯಾವೊಬ್ಬ ಸದಸ್ಯರು ಮತ ಚಲಾಯಿಸಲಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಅಂಗ್ಲೋ ಇಂಡಿಯನ್ಸ್ ಗೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಕಳೆದ 70 ವರ್ಷಗಳಿಂದಲೂ ನೀಡಲಾಗುತ್ತಿರುವ  ಮೀಸಲಾತಿ ಅವಧಿ ಜನವರಿ 25, 2020 ರಂದು ಮುಕ್ತಾಯವಾಗಬೇಕಿತ್ತು. 

ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ನೀಡಲಾಗುವ ಮೀಸಲಾತಿ ಮುಂದಿನ ವರ್ಷ ಜನವರಿ 25ಕ್ಕೆ ಮುಗಿಯಲಿದ್ದು,ಈ ಮಸೂದೆಯಲ್ಲಿ ವಿಸ್ತರಣೆಗೆ ಅವಕಾಶ ನೀಡಿಲ್ಲ. ಆದಾಗ್ಯೂ,  ಬಾಗಿಲು ಮುಚ್ಚಿಲ್ಲ ಆಂಗ್ಲೋ-ಇಂಡಿಯನ್ನರಿಗೆ  ನಾಮನಿರ್ದೇಶನ ವಿಷಯವನ್ನು ಪರಿಗಣಿಸಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ.

 ಸದಸ್ಯರು ಮತ ಚಲಾಯಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಸದನದಲ್ಲಿ ಉಪಸ್ಥಿತರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com