ಉನ್ನಾವೋ ಸಂತ್ರಸ್ತೆ ಕುಟುಂಬಕ್ಕೆ ಭದ್ರತೆ ಮತ್ತು ಪರವಾನಗಿ ಸಹಿತ ಆಯುಧ :ಯುಪಿ ಪೊಲೀಸ್

ಉನ್ನಾವೋ ಸಂತ್ರಸ್ತೆಯ ಕುಟುಂಬ ವರ್ಗಕ್ಕೆ ದಿನದ 24 ಗಂಟೆ ಭದ್ರತೆ ಹಾಗೂ ಪರವಾನಗಿ ಹೊಂದಿರುವ ಆಯುಧ ತಮ್ಮ ಬಳಿ ಇಟ್ಟುಕೊಳ್ಳಲು ಉತ್ತರ ಪ್ರದೇಶ ಪೊಲೀಸರು ಅನುಮತಿ ನೀಡಿದ್ದಾರೆ.
ಸಂತ್ರಸ್ತೆ ಕುಟುಂಂಬಕ್ಕೆ ಪೊಲೀಸರ ಭಧ್ರತೆ
ಸಂತ್ರಸ್ತೆ ಕುಟುಂಂಬಕ್ಕೆ ಪೊಲೀಸರ ಭಧ್ರತೆ

ಲಕ್ನೋ: ಉನ್ನಾವೋ ಸಂತ್ರಸ್ತೆಯ ಕುಟುಂಬ ವರ್ಗಕ್ಕೆ ದಿನದ 24 ಗಂಟೆ ಭದ್ರತೆ ಹಾಗೂ ಪರವಾನಗಿ ಹೊಂದಿರುವ ಆಯುಧ ತಮ್ಮ ಬಳಿ ಇಟ್ಟುಕೊಳ್ಳಲು ಉತ್ತರ ಪ್ರದೇಶ ಪೊಲೀಸರು ಅನುಮತಿ ನೀಡಿದ್ದಾರೆ.
 
ಆರೋಪಿಗಳ ಕಡೆಯವರಿಂದ ಮತ್ತೆ ತೊಂದರೆಯಾಗದಂತೆ ಸಂತ್ರಸ್ತೆಯ ಸಹೋದರಿ ಮತ್ತು ಇತರ ಕುಟುಂಬ ಸದಸ್ಯರಿಗೆ ಭದ್ರತೆ ಹಾಗೂ  ಪರವಾನಗಿ ಸಹಿತ ಆಯುಧ ಒದಗಿಸುವುದಾಗಿ ಪೊಲೀಸ್ ಮುಖ್ಯಸ್ಥ ವಿಕ್ರಮ್ ವೀರ್ ಹೇಳಿದ್ದಾರೆ.

ಆರೋಪಿ ಕಡೆಯಿಂದ ಪದೇ ಪದೇ ಕೇಸ್  ವಾಪಾಸ್ ತೆಗೆದುಕೊಳ್ಳುವಂತೆ ಒತ್ತಡವಿತ್ತು, ಕಳೆದ ವಾರ ಕೂಡ ಕೇಸ್ ವಾಪಸ್ ಪಡೆಯುವಂತೆ ಸಂತ್ರಸ್ತೆಗೆ ಬಲವಂತ ಮಾಡಲಾಗಿತ್ತು, ಆದರೆ ಅದಕ್ಕೆ ಒಪ್ಪದ ಕಾರಣ ಆಕೆಗೆ ಜೀವಂತವಾಗಿ ಬೆಂಕಿ ಹಚ್ಚಲಾಗಿತ್ತು.

ಪ್ರಕರಣದ ಐದು ಆರೋಪಿಗಳ್ನು ಕೊಲೆ ಕೇಸ್ ನಲ್ಲಿ ಬುಕ್ ಮಾಡಲಾಗಿದೆ.  ಇನ್ನು ಇಬ್ಬರು ಅತ್ಯಾಚಾರ ಆರೋಪ ಎದುರಿಸುತ್ತಿದ್ದಾರೆ.

ಇದಲ್ಲದೆ ಸಂತ್ರಸ್ತೆಯ ಕುಟುಂಬದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಒದಗಿಸಲಾಗುವುದು ಎಂದೂ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com