ಗ್ಯಾಸ್ ಚೇಂಬರ್ ದೆಹಲಿಯಲ್ಲಿ ಹೆಚ್ಚು ದಿನ ಬದಕಲು ಸಾಧ್ಯವಿಲ್ಲ, ಇನ್ನು ಗಲ್ಲು ಶಿಕ್ಷೆ ಏಕೆ?; ನಿರ್ಭಯಾ ಅತ್ಯಾಚಾರಿ ಪ್ರಶ್ನೆ

ದೆಹಲಿ ವಾಯು ಮಾಲಿನ್ಯ ಮತ್ತೆ ಸುದ್ದಿಗೆ ಬಂದಿದ್ದು, ಈ ಬಾರಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಿರ್ಭಯಾ ಅತ್ಯಾಚಾರ ಪ್ರಕರಣ ಅಪರಾಧಿ ತನ್ನ ಗಲ್ಲು ಶಿಕ್ಷೆಯನ್ನು ವಿನೂತನವಾಗಿ ಪ್ರಶ್ನಿಸಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿ ವಾಯು ಮಾಲಿನ್ಯ ಮತ್ತೆ ಸುದ್ದಿಗೆ ಬಂದಿದ್ದು, ಈ ಬಾರಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಿರ್ಭಯಾ ಅತ್ಯಾಚಾರ ಪ್ರಕರಣ ಅಪರಾಧಿ ತನ್ನ ಗಲ್ಲು ಶಿಕ್ಷೆಯನ್ನು ವಿನೂತನವಾಗಿ ಪ್ರಶ್ನಿಸಿದ್ದಾನೆ.

ಹೌದು.. ರಾಷ್ಟ್ರ ರಾಜಧಾನಿಯಲ್ಲಿ 2013 ರ ಸೆಷ್ಟೆಂಬರ್​​ 13 ರಂದು ನಡೆದ ನಿರ್ಭಯಾ ರೇಪ್​ ಪ್ರಕರಣದ ನಾಲ್ವರು ಆರೋಪಿಗಳಿಗೆ ಸುಪ್ರಿಂಕೋರ್ಟ್​ ಗಲ್ಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯನ್ನು ಜಾರಿ ಮಾಡುವುದು ವಿಳಂಭವಾಗುತ್ತಿದೆ ಎನ್ನುವ ಅಸಮಾಧಾನ ಕೇಳಿಬರುತ್ತಿರುವ ಬೆನ್ನಲ್ಲೇ ಆ ನಾಲ್ಕು ಅಪರಾಧಿಗಳ ಪೈಕಿ, ಓರ್ವ ಮತ್ತೆ ಸುಪ್ರಿಂಕೋರ್ಟ್​ಗೆ ಪುನರ್​ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದಾನೆ.

ಕಳೆದ ವರ್ಷ ಜುಲೈ 9 ರಂದು ಸುಪ್ರೀಂಕೋರ್ಟ್ ಪ್ರಕರಣದ ಮೂರು ಆರೋಪಿಗಳಾದ ಮುಖೇಶ್​, ಪವನ್​ ಗುಪ್ತಾ, ವಿನಯ್​ ಶರ್ಮಾ ಸಲ್ಲಿಸಿದ್ದ ಪುನರ್​ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿತ್ತು. ಆ ಸಂದರ್ಭದಲ್ಲಿ ಅರ್ಜಿ ಸಲ್ಲಿಸದ ಅಕ್ಷಯ್​, ತನ್ನ ವಕೀಲ ಎ.ಪಿ ಸಿಂಗ್​ ಮೂಲಕ ನಿನ್ನೆ ಸುಪ್ರೀಂಕೋರ್ಟ್​ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಪುನರ್​ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾನೆ. ಈ ವೇಳೆ 'ದೆಹಲಿ-ಎನ್‌ಸಿಆರ್ ಗ್ಯಾಸ್ ಚೇಂಬರ್ ನಂತೆ ಆಗಿವೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿಯೂ ಇದು ಸಾಬೀತಾಗಿದೆ. ಕಲುಷಿತ ಗಾಳಿ, ನೀರಿನಿಂದಾಗಿ ಜೀವಿತಾವಧಿ ಕಡಿಮೆಯಾಗುತ್ತಿದೆ. ಗಲ್ಲು ಶಿಕ್ಷೆ ವಿಧಿಸುವ ಅಗತ್ಯವೇನಿದೆ?" ಎಂದು ಗಲ್ಲು ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯಲ್ಲಿ ಪ್ರಶ್ನೆ ಮಾಡಿದ್ದಾನೆ.

ಅಕ್ಷಯ್ ನಿರ್ಭಯಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುವ 4ನೇ ಅಪರಾಧಿ. ಮುಕೇಶ್, ವಿನಯ್ ಮತ್ತು ಪವನ್ ಸಲ್ಲಿಸಿದ್ದ ಅರ್ಜಿಗಳನ್ನು ಈಗಾಗಲೇ ನ್ಯಾಯಾಲಯ ವಜಾಗೊಳಿಸಿದೆ. 2018ರ ಜುಲೈನಲ್ಲಿ ನ್ಯಾಯಾಲಯ ಮೂವರು ಅಪರಾಧಿಗಳ ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿತ್ತು. ಅಪರಾಧಿಗಳ ಕ್ಷಮಾದಾನ ಅರ್ಜಿಯೂ ವಜಾಗೊಂಡಿದ್ದು, ಅವರನ್ನು ಡಿಸೆಂಬರ್ 16ರಂದು ಗಲ್ಲಿಗೇರಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. 2017ರ ಮೇನಲ್ಲಿ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆ ತೀರ್ಪನ್ನು ಪುನರ್ ಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದು ಸವೋಚ್ಚ ನ್ಯಾಯಾಲಯ ಈಗಾಗಲೇ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com