ಸಾಲ ತೀರಿಸದ ಯುವಕನೊಡನೆ ಅಪ್ರಾಪ್ತ ಮಗಳ ಮದುವೆ ಮಾಡಿಸಿದ ಪೋಷಕರು!

 15 ಸಾವಿರ ರು. ಸಾಲ ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ ತಮ್ಮ  13 ವರ್ಷದ ಮಗಳನ್ನು ಅವರ ಸಂಬಂಧಿಯೊಬ್ಬನಿಗೆ ಬಲವಂತವಾಗಿ ಮದುವೆ ಮಾಡಿಸಿದ ಪ್ರಸಂಗ ತಮಿಳುನಾಡಿನಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕರೂರ್(ತಮಿಳುನಾಡು): 15 ಸಾವಿರ ರು. ಸಾಲ ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ ತಮ್ಮ  13 ವರ್ಷದ ಮಗಳನ್ನು ಅವರ ಸಂಬಂಧಿಯೊಬ್ಬನಿಗೆ ಬಲವಂತವಾಗಿ ಮದುವೆ ಮಾಡಿಸಿದ ಪ್ರಸಂಗ ತಮಿಳುನಾಡಿನಲ್ಲಿ ನಡೆದಿದೆ. ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯನ್ನು ಬಲವಂತದಿಂದ ಸಂಬಂಧಿಯೊಡನೆ ವಿವಾಹ ಮಾಡಿಸಿದ್ದ ಕಾರಣಕ್ಕೆ ಬಾಲಕಿಯ ಪತಿ ಹಾಗೂ ಇಬ್ಬರ ಮನೆಯವರನ್ನೂ ಪೋಲೀಸರು ಬಂಧಿಸಿದ್ದಾರೆ. ಅಲ್ಲದೆ ಜೂನ್ 26 ರಂದು ಮದುವೆ ನಡೆಸಿದ 20 ಗ್ರಾಮಸ್ಥರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಎರುತಿಕೋನಾಪಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಾಲಕಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದಳು. ಆಕೆಯ ತಂದೆ  ಸ್ಯಾಮಿ (ಎಲ್ಲಾ ಹೆಸರು ಬದಲಿಸಲಾಗಿದೆ) (45) ಮತ್ತು ತಾಯಿ ವಲ್ಲಿ (40) ದಿನಗೂಲಿ ಕಾರ್ಮಿಕರಾಗಿದ್ದರು, ಅವರು ತಮ್ಮ ಮಗಳನ್ನು ತಮಿಳುನಾಡಿನ  ದಿಂಡಿಗುಲ್ ಜಿಲ್ಲೆಯ ಗೌಂದನೂರ್ ನಿವಾಸಿಯಾಗಿದ್ದ ಮುರುಗನ್ (45) ಮತ್ತು ಅಂಜುಗಂ (40) ಅವರ ಪುತ್ರ ಸುಬ್ರಮಣಿ (23) ಜತೆ ಬಲವಂತದಿಂದ ವಿವಾಹ ಮಾಡಿಸಿದ್ದಾರೆ. ಅಲ್ಲದೆ ಸುಬ್ರಮಣಿ ಕೂಡ ಬಾಲಕಿಯನ್ನು ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸಿದ್ದನೆಂದು ಪೋಲೀಸರು ವಿವರಿಸಿದ್ದಾರೆ. ಇದೀಗ ಪೋಲೀಸರ ಸಹಾಯದಿಂದ  ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ.

ಪ್ರಕರಣವು ಮಂಗಳವಾರ ಸಂಜೆ ಕುಲಿಥಲೈ ಮಹಿಳಾ ಪೋಲೀಸ್ ಠಾಣೆಯ ಮೆಟ್ಟಿಲೇರಿದೆ. ಸಾಮಿ, ವಲ್ಲಿ, ಸುಬ್ರಮಣಿ, ಮುರುಗನ್ ಹಾಗೂ  ಅಂಜುಗಂ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಾಲ್ಯ ವಿವಾಹ ನಿಗ್ರಹ ಕಾಯ್ದೆ 2006 ಮತ್ತು ಪೋಕ್ಸೊ ಕಾಯ್ದೆ 2012 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

 “ಸುಬ್ರಮಣಿ ಸ್ಯಾಮಿಯ ಸೋದರಳಿಯ. ಅವರ ಕುಟುಂಬದಲ್ಲಿ ಬಾಲ್ಯವಿವಾಹ ಸಾಮಾನ್ಯವಾಗಿದೆ ಎಂದು ಅವರು ಹೇಳುತ್ತಿದ್ದಾರೆ. . ದೀಪಾವಳಿ ಸಮಯದಲ್ಲಿ ತನ್ನ ಹೆತ್ತವರ ಮನೆಗೆ ಬಂದಿದ್ದ ಬಾಲಕಿ ಪತಿಯ ಮನೆಗೆ ಮರಳುವುದಕ್ಕೆ ನಿರಾಕರಿಸಿದ್ದಾಳೆ. ಆದರೆ ಆಕೆಯ ಪೋಷಕರು ಬಲವಂತದಿಂದ ಆಕೆಯನ್ನು ಗಂಡನ ಮನೆಗೆ ಕಳಿಸಿಕೊಡಲು ಯತ್ನಿಸಿದ್ದಾರೆ. ಆ ವೇಳೆ ಬಾಲಕಿ ಪೋಲೀಸರಿಗೆ ದೂರು ಸಲ್ಲಿಸಿದ್ದಾಳೆ." ಅಧಿಕಾರಿಯೊಬ್ಬರು ಎಕ್ಸ್‌ಪ್ರೆಸ್‌ಗೆ, ತಿಳಿಸಿದ್ದಾರೆ. 

ಇದೇ ವೇಳೆ ಬಾಲಕಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಆಕೆ ಗರ್ಭಿಣಿಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com