ಉತ್ತರ ಪ್ರದೇಶ: ಮುಖ್ಯಮಂತ್ರಿ ಆದಿತ್ಯನಾಥ್ ನಿವಾಸದ ಹೊರಗೆ ಧರಣಿ, ಸಾಮಾಜಿಕ ಹೋರಾಟಗಾರ್ತಿಯ ಬಂಧನ

ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಕೋರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ  ಸಾಮಾಜಿಕ ಹೋರಾಟಗಾರ್ತಿ ಅನು ದುಬೆ ಅವರನ್ನು ಪೊಲೀಸರು ಬಂಧಿಸಿದ್ದಾರೆ
ಯೋಗಿ ಆದಿತ್ಯನಾಥ್, ಅನುದುಬೆ
ಯೋಗಿ ಆದಿತ್ಯನಾಥ್, ಅನುದುಬೆ

ಲಖನೌ: ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಕೋರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ  ಸಾಮಾಜಿಕ ಹೋರಾಟಗಾರ್ತಿ ಅನು ದುಬೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನನ್ನ ಸ್ವಂತ ದೇಶದಲ್ಲಿ ಏಕೆ ನನಗೆ ಸುರಕ್ಷತೆ ಇಲ್ಲ ಎಂಬ ಫಲಕವನ್ನು ಹಿಡಿದು ಅನು ದುಬೆ ಆದಿತ್ಯನಾಥ್ ನಿವಾಸದ ಬಳಿ ಧರಣಿ ನಡೆಸುತ್ತಿದ್ದರು. ನಂತರ ಅವರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಹೈದ್ರಾಬಾದಿನ ಪಶು ವೈದ್ಯ ಮೇಲಿನ ಅತ್ಯಾಚಾರ ವಿರುದ್ಧ ನವೆಂಬರ್ 30 ರಂದು ದೆಹಲಿಯಲ್ಲಿ ಏಕಾಂಗಿಯಾಗಿ ದುಬೆ ಪ್ರತಿಭಟನೆ ನಡೆಸಿದ್ದರು. ನಂತರ ಮಹಿಳಾ ಪೊಲೀಸರಿಂದ ಹಲ್ಲೆಗೊಳಗಾಗಿದ್ದರು. 

ಆರೋಪಿಗಳು ಬೆಂಕಿ ಹಚ್ಚಿದ್ದರಿಂದ  ಉನ್ನಾವೋ ಅತ್ಯಾಚಾರ ಸಂತ್ರಸ್ತೆ ದಾಖಲಾಗಿದ್ದ ದೆಹಲಿಯ ಸಪ್ದರ್ ಜಂಗ್ ಆಸ್ಪತ್ರೆ ಮುಂಭಾಗ ಡಿಸೆಂಬರ್ 5 ರಂದು ಅನು ದುಬೆ ಪ್ರತಿಭಟನೆ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com