ಚುನಾಯಿತ ಪ್ರತಿನಿಧಿಗಳ ಮೇಲೆ ಮೊಕದ್ದಮೆ: ರಾಜ್ಯಸಭೆಯಲ್ಲಿ ಟಿಡಿಪಿ ಸಂಸದನಿಂದ ಶೂನ್ಯವೇಳೆ ನೊಟೀಸ್ 

ಚುನಾವಣಾ ಪ್ರತಿನಿಧಿಗಳ ಮೇಲೆ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕ್ರಿಮಿನಲ್ ಕೇಸುಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸಂಸದ ಕೆ ರವೀಂದ್ರ ಕುಮಾರ್ ಶುಕ್ರವಾರ ರಾಜ್ಯಸಭೆಯಲ್ಲಿ ಶೂನ್ಯ ವೇಳೆ ನೊಟೀಸ್ ಜಾರಿ ಮಾಡಿದ್ದಾರೆ.

Published: 13th December 2019 11:34 AM  |   Last Updated: 13th December 2019 11:34 AM   |  A+A-


Rajya Sabha

ರಾಜ್ಯಸಭೆ

Posted By : Sumana Upadhyaya
Source : ANI

ನವದೆಹಲಿ: ಚುನಾವಣಾ ಪ್ರತಿನಿಧಿಗಳ ಮೇಲೆ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕ್ರಿಮಿನಲ್ ಕೇಸುಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸಂಸದ ಕೆ ರವೀಂದ್ರ ಕುಮಾರ್ ಶುಕ್ರವಾರ ರಾಜ್ಯಸಭೆಯಲ್ಲಿ ಶೂನ್ಯ ವೇಳೆ ನೊಟೀಸ್ ಜಾರಿ ಮಾಡಿದ್ದಾರೆ.


ಶೂನ್ಯ ವೇಳೆಯಲ್ಲಿ ಸಂಸದರು 10 ದಿನಗಳ ಮೊದಲು ಕಡ್ಡಾಯವಾಗಿ ನೊಟೀಸ್ ಕೊಡದೆ ಸಂಸದರು ಅತಿಮುಖ್ಯ ವಿಷಯಕ್ಕೆ ಸಂಬಂಧಿಸಿದ ವಿಷಯಗಳ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಳ್ಳಬಹುದು. 


ನವೆಂಬರ್ 18ರಂದು ಆರಂಭವಾದ ಸಂಸತ್ತಿನ ಚಳಿಗಾಲ ಅಧಿವೇಶನ ಇಂದಿಗೆ ಮುಕ್ತಾಯವಾಗಲಿದೆ. ಇದು ರಾಜ್ಯಸಭೆಯ 250ನೇ ಅಧಿವೇಶನವಾಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp