ಹಣಕಾಸು ಅಕ್ರಮ: ಲೀಲಾ ಸ್ಯಾಮ್ಸನ್‌ ವಿರುದ್ಧ ಕೇಸ್ ದಾಖಲಿಸಿದ ಸಿಬಿಐ

ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ಸಂಗೀತ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್‌ ಅವರ ವಿರುದ್ಧ ಸಿಬಿಐ ಶನಿವಾರ ಕೇಸ್ ದಾಖಲಿಸಿದೆ.

Published: 14th December 2019 02:56 PM  |   Last Updated: 14th December 2019 02:56 PM   |  A+A-


leela-1

ಲೀಲಾ ಸ್ಯಾಮ್ಸನ್‌

Posted By : Lingaraj Badiger
Source : PTI

ನವದೆಹಲಿ: ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ಸಂಗೀತ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್‌ ಅವರ ವಿರುದ್ಧ ಸಿಬಿಐ ಶನಿವಾರ ಕೇಸ್ ದಾಖಲಿಸಿದೆ.

ಪದ್ಮ ಪ್ರಶಸ್ತಿ ಪುರಸ್ಕೃತ ಲೀಲಾ ಸ್ಯಾಮ್ಸನ್ ಅವರು ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ವೇಳೆ ಕೂತಂಬಳಂ ಆಡಿಟೋರಿಯಂ ನವೀಕರಣಕ್ಕೆ ಅನಗತ್ಯವಾಗಿ 7.02 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂದು ಸಿಬಿಐ ಆರೋಪಿಸಿದೆ. 

ಈ ಸಂಬಂಧ ಲೀಲಾ ಸ್ಯಾಮ್ಸನ್ ಹಾಗೂ ಕಲಾಕ್ಷೇತ್ರ ಫೌಂಡೇಷನ್‌ನ ಅಧಿಕಾರಿಗಳಾದ ಟಿಎಸ್ ಮೂರ್ತಿ, ಎಸ್ ರಾಮಚಂದ್ರನ್ ಹಾಗೂ ವಿ ಶ್ರೀನಿವಾಸನ್ ಅವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.

2010-11ರ ಅವಧಿಯಲ್ಲಿ ಕೂತಂಬಳಂ ಸಭಾಂಗಣದ ನವೀಕರಣಕ್ಕೆ ಅನಗತ್ಯವಾಗಿ 7 ಕೋಟಿಗೂ ಅಧಿಕ ಮೊತ್ತವನ್ನು ವ್ಯಯಿಸಿದ್ದಾಗಿ ಲೆಕ್ಕಪರಿಶೋಧನಾ ವರದಿ ಆಕ್ಷೇಪಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಂಸ್ಕೃತಿ ಸಚಿವಾಲಯ, ಈ ಅಕ್ರಮಕ್ಕೆ ಯಾರು ಹೊಣೆ ಎಂಬುದನ್ನು ಗುರುತಿಸುವಂತೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿತ್ತು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp