ಭಾರತ-ಮಾಲ್ಡೀವ್ಸ್ ಭವಿಷ್ಯ ಉಜ್ವಲವಾಗಿದೆ: ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ 

ಭಾರತ ಮತ್ತು ಮಾಲ್ಡೀವ್ಸ್ ದೇಶಗಳ ಸರ್ಕಾರಗಳು ಸಮಾನ ದಿಕ್ಕಿನಲ್ಲಿದ್ದು ಭವಿಷ್ಯದಲ್ಲಿ ಈ ಎರಡು ದೇಶಗಳ ಸಂಬಂಧಗಳು ಉಜ್ವಲವಾಗಿದೆ ಎಂದು ಮಾಲ್ಡೀವ್ಸ್ ಸಂಸದೀಯ ಸ್ಪೀಕರ್ ಮೊಹಮ್ಮದ್ ನಶೀದ್ ಹೇಳಿದ್ದಾರೆ. 
ಮೊಹಮ್ಮದ್ ನಶೀದ್
ಮೊಹಮ್ಮದ್ ನಶೀದ್

ನವದೆಹಲಿ: ಭಾರತ ಮತ್ತು ಮಾಲ್ಡೀವ್ಸ್ ದೇಶಗಳ ಸರ್ಕಾರಗಳು ಸಮಾನ ದಿಕ್ಕಿನಲ್ಲಿದ್ದು ಭವಿಷ್ಯದಲ್ಲಿ ಈ ಎರಡು ದೇಶಗಳ ಸಂಬಂಧಗಳು ಉಜ್ವಲವಾಗಿದೆ ಎಂದು ಮಾಲ್ಡೀವ್ಸ್ ಸಂಸದೀಯ ಸ್ಪೀಕರ್ ಮೊಹಮ್ಮದ್ ನಶೀದ್ ಹೇಳಿದ್ದಾರೆ.


ರಾಜ್ಯಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಜಂಟಿ ಆಹ್ವಾನದ ಮೇರೆಗೆ 5 ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ಅವರು, ಭಾರತದ ಮೊದಲ ವಿದೇಶಿ ನೀತಿಯನ್ನು ಘೋಷಿಸಿದ್ದೇವೆ. ಅನಾದಿ ಕಾಲದಿಂದಲೂ ಭಾರತ ನಮ್ಮ ಜೊತೆಯಲ್ಲಿಯೇ ಪಕ್ಕದಲ್ಲಿದೆ. ನಾವು ಓದುವುದು ಒಂದೇ ರೀತಿಯ ಪುಸ್ತಕವನ್ನು. ತಿನ್ನುವುದು ಒಂದೇ ರೀತಿಯ ಆಹಾರವನ್ನು. ಒಂದೇ ರೀತಿಯ ಸಿನಿಮಾ ನೋಡುತ್ತೇವೆ, ಒಂದೇ ರೀತಿಯ ಕೆಲಸ ಮಾಡುತ್ತೇವೆ. ನಾವು ಎರಡೂ ರಾಷ್ಟ್ರದವರು ಒಂದೇ ಎಂದು ನಶೀದ್ ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.


ಮಾಲ್ಡೀವ್ಸ್ ದೇಶದ ಮಾಜಿ ಅಧ್ಯಕ್ಷರೂ ಆಗಿರುವ ನಶೀದ್, ಮಾಲ್ಡೀವ್ಸ್ ದೇಶದ ಜನರು ಬಾಲಿವುಡ್ ಚಿತ್ರಗಳನ್ನು ನೋಡುವುದು ನಿಲ್ಲಿಸಿದಾಗ, ಬಿರಿಯಾನಿ, ಗುಲಾಂ ಜಮೂನ್ ತಿನ್ನುವುದನ್ನು ನಿಲ್ಲಿಸಿದಾಗ ಮಾತ್ರ ಎರಡು ದೇಶಗಳ ಸಂಬಂಧ ಕೆಟ್ಟು ಹೋಗಿದೆ ಎಂದು ಹೇಳುತ್ತೇನೆ ಎಂದಿದ್ದಾರೆ.


ಮಾಲ್ಡೀವ್ಸ್ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಶೇಕಡಾ 100ರಷ್ಟು ಹೆಚ್ಚಾಗಿದೆ ಎಂದು ಸಹ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com