ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ಸತ್ಯಕ್ಕೆ ನಾನೆಂದೂ ಕ್ಷಮೆಯಾಚಿಸೋಲ್ಲ: ರಾಹುಲ್ ಗಾಂಧಿ

ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ಸತ್ಯಕ್ಕೆ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಹೇಳಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ಸತ್ಯಕ್ಕೆ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಹೇಳಿದ್ದಾರೆ. 

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಬಚಾವೋ ರ್ಯಾಲಿಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿಯವರು, ಈ ಹಿಂದೆ ನೀಡಿದ್ದ ರೇಪ್ ಇನ್ ಇಂಡಿಯಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 

ಸಂಸತ್ತಿನಲ್ಲಿ ಬಿಜೆಪಿ ನಾಯಕರು ನನ್ನ ಹೇಳಿಕೆ ಕುರಿತು ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು. ಸತ್ಯದ ಮಾತಿಗೆ ಕ್ಷಮೆಯಾಚಿಸುವಂತೆ ಆಗ್ರಹಿಸುತ್ತಿದ್ದಾರೆ. ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ. ನನ್ನ ಹೆಸರು ರಾಹುಲ್ ಗಾಂಧಿ. ಸತ್ಯಕ್ಕೆ ನಾನೆಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. 

ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೇಪ್ ಕ್ಯಾಪಿಟಲ್ ಎಂದು ಹೇಳಿರುವ ವಿಡಿಯೋ ಈಗಲೂ ನನ್ನ ಮೊಬೈಲ್ ನಲ್ಲಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುತ್ತೇನೆ. ಅದನ್ನು ಎಲ್ಲರೂ ನೋಡಲಿ. ಪ್ರಸ್ತುತ ವಿಚಾರ ಇರುವುದು ನನ್ನ ಹೇಳಿಕೆ ಬಗ್ಗೆಯಲ್ಲ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ನನ್ನ ಹೇಳಿಕೆಯನ್ನು ಸುಖಾಸುಮ್ಮನೆ ವಿಚಾರ ಮಾಡುತ್ತಿದ್ದಾರೆ. 

ಭಾರತದ ವಿವಿಧ ಭಾಗಗಳಲ್ಲಿಯೂ ಅತ್ಯಾಚಾರ ಸುದ್ದಿಯಾಗುತ್ತಿದೆ. ಎಲ್ಲೆಡೆ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಲೇ ಇದೆ. ಮೇಕ್ ಇನ್ ಇಂಡಿಯಾ ಬಗ್ಗೆ ಮೋದಿ ಮಾತನಾಡಿದ್ದನ್ನು ದಿನ ಪತ್ರಿಕೆಯಲ್ಲಿ ನೋಡುತ್ತೇವೆಂದು ಕೊಂಡಿದ್ದೆ. ಆದರೆ, ಇಂದಿನ ದಿನಪತ್ರಿಕೆಗಳಲ್ಲಿ ಎಲ್ಲೆಡೆ ರೇಪ್ ಇನ್ ಇಂಡಿಯಾ ಸುದ್ದಿಗಳು ಬರುತ್ತಿವೆ. ಎಲ್ಲೆಡೆ ಅತ್ಯಾಚಾರ ನಡೆಯುತ್ತಲೇ ಇದೆ ಎಂದು ಹೇಳಿದ್ದೆ. 

ಉನ್ನಾವೋದಲ್ಲಿ ಬಿಜೆಪಿ ಶಾಸಕ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತೆಯನ್ನು ಅಪಘಾತಕ್ಕೀಡಾಗುವಂತೆ ಮಾಡಲಾಗಿತ್ತು. ಆದರೂ, ಮೋದಿಯವರು ಏನನ್ನೂ ಮಾತನಾಡಲಿಲ್ಲ. ಮೋದಿಯವರು ಹಿಂಸಾಚಾರವನ್ನು ಪಸರಿಸುತ್ತಿದ್ದಾರೆ. ಇಡೀ ಈ ಹಿಂಸಾಚಾರ ಇಡೀ ದೇಶವೇ ಹೊತ್ತಿಕೊಳ್ಳುವಂತೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com