ಪೌರತ್ವ ಮಸೂದೆ ಹೆಸರಲ್ಲಿ ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ: ನರೇಂದ್ರ ಮೋದಿ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪೌರತ್ವ ಕಾನೂನಿನ ಮೇಲೆ ವ್ಯಥಾ ದೋಷಾರೋಪ ಮಡುತ್ತಿದೆ ಅಲ್ಲದೆ  ದೇಶದ ಕೆಲವು ಭಾಗಗಳಲ್ಲಿನ ಅಶಾಂತಿ ಮತ್ತು ಅಗ್ನಿಸ್ಪರ್ಶದ ಹಿಂದೆ ವಿರೋಧ ಪಕ್ಷಗಳು ಕೈವಾಡವಿದೆ.ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪೌರತ್ವ ಕಾನೂನಿನ ಮೇಲೆ ವ್ಯಥಾ ದೋಷಾರೋಪ ಮಡುತ್ತಿದೆ ಅಲ್ಲದೆ  ದೇಶದ ಕೆಲವು ಭಾಗಗಳಲ್ಲಿನ ಅಶಾಂತಿ ಮತ್ತು ಅಗ್ನಿಸ್ಪರ್ಶದ ಹಿಂದೆ ವಿರೋಧ ಪಕ್ಷಗಳು ಕೈವಾಡವಿದೆ.ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. 

ಜಾರ್ಖಂಡ್‌ನ ಡುಮ್ಕಾದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಜಾರ್ಖಂಡ್‌ನಲ್ಲಿನ ಪ್ರತಿಪಕ್ಷಗಳ ಮೈತ್ರಿಕೂಟವನ್ನು ಖಂಡಿಸಿದ್ದಲ್ಲದೆ ಕಾಂಗ್ರೆಸ್ ಭಾರತದ ಅಭಿವೃದ್ಧಿಗೆ ಯಾವ ಮಾರ್ಗಸೂಚಿಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. 

"ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪೌರತ್ವ ಕಾಯ್ದೆಯ ಹೆಸರಲ್ಲಿ ವ್ಯಂಥಾ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಆದರೆ ಈಶಾನ್ಯದ ಜನ ಹಿಂಸಾಚಾರವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್  ಹಾಗೂ ಅದರ ಮಿತ್ರಪಕ್ಷಗಳು ತಾವು ಸಂಸತ್ತಿನಲ್ಲಿ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಸರಿಯಾಗಿದೆ ಎಂದು ಸುಳ್ಳು ಪ್ರಚಾರವನ್ನು ಕೈಗೊಂಡಿದೆ." ಅವರು ಹೇಳಿದರು.

ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸದೆ ವಿರೋಧ ಪಕ್ಷಗಳ ನಾಯಕರು ತಮಗಾಗಿ ಮಾತ್ರ ಅರಮನೆಗಳನ್ನು ನಿರ್ಮಿಸಿದ್ದಾರೆ ಎಂದು ಮೋದಿ ದೂಷಿಸಿದ್ದಾರೆ.ಕೇಂದ್ರ ಮತ್ತು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರಗಳ ಸಾಧನೆಗಳನ್ನು ಪಟ್ಟಿ ಮಾಡಿದ ಅವರು, "ನಮ್ಮ ಪಕ್ಷವು ರಾಜ್ಯದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com