ಫಾಸ್ಟ್ಯಾಗ್ ಅಳವಡಿಕೆ ಒಂದು ತಿಂಗಳು ಮುಂದೂಡಿಕೆ, ವಾಹನ ಸವಾರರಿಗೆ ನಿರಾಳ, ಜನವರಿ 15 ಅಂತಿಮ ಗಡುವು 

ಹೆದ್ದಾರಿ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್‌ ಟ್ಯಾಗ್‌ ಮೂಲಕ ಸುಂಕ ಪಾವತಿಸಬೇಕು ಎಂಬ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆ ಆದೇಶ ದಿನಾಂಕವನ್ನು ಮುಂದೂಡಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆದ್ದಾರಿ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್‌ ಟ್ಯಾಗ್‌ ಮೂಲಕ ಸುಂಕ ಪಾವತಿಸಬೇಕು ಎಂಬ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆ ಆದೇಶ ದಿನಾಂಕವನ್ನು ಮುಂದೂಡಲಾಗಿದೆ. 


ಇಂದಿನಿಂದ ಜಾರಿಗೆ ಬರಲಿದ್ದ ಫಾಸ್ಟ್ಯಾಗ್ ಪಾವತಿ ವಿಧಾನ ಒಂದು ತಿಂಗಳು ಮುಂದೂಡಲಾಗಿದೆ. ವಾಹನ ಮಾಲೀಕರಿಂದ ಬೇಡಿಕೆ ಹೆಚ್ಚಿದ ಹಿನ್ನಲೆಯಲ್ಲಿ ಫಾಸ್ಟ್ಯಾಗ್ ಟ್ಯಾಗ್ ಗಳು ಸಾಕಷ್ಟು ಇಲ್ಲದಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮನವಿಯಂತೆ ಫಾಸ್ಟ್ಯಾಗ್ ಕಡ್ಡಾಯ ದಿನಾಂಕವನ್ನು ಮುಂದೂಡಲಾಗಿದೆ. 


ನೂತನ ಆದೇಶದಂತೆ ಟೋಲ್ ಗೇಟ್ ಗಳಲ್ಲಿ ಎಲೆಕ್ಟ್ರಾನಿಕ್ ಪಾವತಿ ವಿಧಾನವಾದ ಫಾಸ್ಟ್ಯಾಗ್ ಅಳವಡಿಕೆಗೆ ಕೊನೆಯ ದಿನಾಂಕ ಜನವರಿ 15 ಆಗಿದೆ. ಆರಂಭದಲ್ಲಿ ಡಿಸೆಂಬರ್ 1ಕ್ಕೆ ಅಂತಿಮ ಗಡವು ನೀಡಲಾಗಿತ್ತು. ನಂತರ ಅದನ್ನು ಡಿಸೆಂಬರ್ 15ಕ್ಕೆ ಮುಂದೂಡಲಾಗಿತ್ತು. 


ಸಾರಿಗೆ ಸಚಿವಾಲಯದ ಈ ಹಿಂದಿನ ಆದೇಶದ ಪ್ರಕಾರ, ಫಾಸ್ಟ್ಯಾಗ್ ಬಳಸದಿರುವ ವಾಹನ ಮಾಲೀಕರು ಟೋಲ್ ಗೇಟ್ ನಲ್ಲಿ ದ್ವಿಗುಣ ಮೊತ್ತ ಪಾವತಿಸಬೇಕು. ಇಲ್ಲವೇ ಸಿಂಗಲ್ ಲೇನ್ ನಲ್ಲಿ ದೀರ್ಘ ಸಮಯದವರೆಗೆ ಕಾದು ಕುಳಿತು ಹಣ ಪಾವತಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com