ಮಹಿಳಾ ಪತ್ರಕರ್ತೆ
ಮಹಿಳಾ ಪತ್ರಕರ್ತೆ

ಜಾಮಿಯಾ ಪ್ರತಿಭಟನೆ: ಪೊಲೀಸರು ನನ್ನ ಕೂದಲು ಹಿಡಿದು, ಮೊಬೈಲ್ ಕಿತ್ತು ಒಡೆದು ಹಾಕಿದರು- ಪತ್ರಕರ್ತೆ

ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರು ನನ್ನ ಕೂದಲು ಹಿಡಿದು ಎಳೆದು, ಮೊಬೈಲ್ ಕಿತ್ತುಕೊಂಡು ಒಡೆದು ಹಾಕಿದರು ಎಂದು ಮಹಿಳಾ ಪತ್ರಕರ್ತೆಯೊಬ್ಬರು ಆರೋಪಿಸಿದ್ದಾರೆ. 

ನವದೆಹಲಿ: ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರು ನನ್ನ ಕೂದಲು ಹಿಡಿದು ಎಳೆದು, ಮೊಬೈಲ್ ಕಿತ್ತುಕೊಂಡು ಒಡೆದು ಹಾಕಿದರು ಎಂದು ಮಹಿಳಾ ಪತ್ರಕರ್ತೆಯೊಬ್ಬರು ಆರೋಪಿಸಿದ್ದಾರೆ. 

ಪ್ರತಿಭಟನಾ ಸ್ಥಳದಲ್ಲಿ ಸುದ್ದಿಯನ್ನು ಮಾಡುತ್ತಿದ್ದ ವೇಳೆ ಸ್ಥಳದಲ್ಲಿದ್ದ ಪೊಲೀಸರು ನನ್ನನ್ನು ಅಶ್ಲೀಲ ಪದಗಳಿಂದ ನಿಂದಿಸಿದರು. ಅಲ್ಲದೆ, ಕೂದಲು ಹಿಡಿದು ಎಳೆದು, ಅಶ್ಲೀಲ ಪದಗಳಿಂದ ನಿಂದಿಸಿದರು. ಬಳಿಕ ನನ್ನ ಮೊಬೈಲ್ ಫೋನ್ ತೆಗೆದುಕೊಂಡು ಒಡೆದು ಹಾಕಿದರು. ಲಾಠಿಯಿಂದಲೂ ನನಗೆ ಹೊಡೆದರು ಎಂದು ಪತ್ರಕರ್ತೆ ಬುಷ್ರಾ ಶೇಕ್ ಹೇಳಿದ್ದಾರೆ. 

ಪೊಲೀಸರು ಫೋನ್ ಕಸಿದುಕೊಂಡ ಬಳಿಕ ಫೋನ್ ನೀಡುವಂತೆ ಹೇಳಿದೆ. ಈ ವೇಳೆ ಅಶ್ಲೀಲ ಭಾಷೆಗಳಲ್ಲಿ ನಿಂದಿಸಿದರು. ಪ್ರತಿಭಟನಾ ಸ್ಥಳಕ್ಕೆ ತಮಾಷೆ ಮಾಡಲು ನಾನು ಹೋಗಿರಲಿಲ್ಲ, ಸುದ್ದಿ ಮಾಡಲು ಹೋಗಿದ್ದೆ ಎಂದು ಬುಷ್ರಾ ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com