ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ‘ಪದ್ಮಶ್ರೀ’ ಹಿಂದಿರುಗಿಸಿದ ಉರ್ದು ಸಾಹಿತಿ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೇಶಾದ್ಯಂತ ಬುದ್ಧಿಜೀವಿಗಳು ಸಹ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಖ್ಯಾತ ಉರ್ದು ಲೇಖಕ ಮತ್ತು ಬರಹಗಾರ ಮುಜತಾಬಾ ಹುಸೇನ್ ತಮ್ಮ' ಪದ್ಮಶ್ರೀ 'ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.
ಮುಜತಾಬಾ ಹುಸೇನ್
ಮುಜತಾಬಾ ಹುಸೇನ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೇಶಾದ್ಯಂತ ಬುದ್ಧಿಜೀವಿಗಳು ಸಹ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಖ್ಯಾತ ಉರ್ದು ಲೇಖಕ ಮತ್ತು ಬರಹಗಾರ ಮುಜತಾಬಾ ಹುಸೇನ್ ತಮ್ಮ' ಪದ್ಮಶ್ರೀ 'ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

ಹೈದರಾಬಾದ್‌ನ ವರದಿಯ ಪ್ರಕಾರ, ಉರ್ದು ಭಾಷೆಯ ಪ್ರಸಿದ್ಧ ಹಾಸ್ಯ ಬರಹಗಾರ ಹುಸೇನ್ "ಜೀವನದ ತಿಳಿ ಹಾಸ್ಯವನ್ನು ಕಳೆದುಕೊಂಡಿದ್ದೇನೆ" ಎಂದು ತಿಳಿಸಿದ್ದು., ಪದ್ಮ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ.

“ನಾವು ದೇಶದಲ್ಲಿ ಭಯ ಮತ್ತು ದ್ವೇಷದ ವಾತಾವರಣವನ್ನು ಅನುಭವಿಸುತ್ತಿದ್ದೇವೆ. ನನಗೆ ಉಸಿರುಗಟ್ಟಿದಂತೆ ಭಾಸವಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

"ನನ್ನ ಆತ್ಮಸಾಕ್ಷಿಯು ನನ್ನನ್ನು ಚುಚ್ಚುತ್ತಿದೆ." ನಾನು ಇದಕ್ಕಿಂತ ಹೆಚ್ಚು ತಾಳ್ಮೆಯಿಂದಿರಲು ಸಾಧ್ಯವಿಲ್ಲ, '' ಎಂದು ಹುಸೇನ್ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ. 
  
ಮಂಗಳವಾರ ಜಾರ್ಖಂಡ್‌ನಲ್ಲಿ ನಡೆದ ಕೊನೆಯ ಹಂತದ ಮತದಾನದ ಸಂದರ್ಭದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ವಿರುದ್ಧ ಕಿಡಿ ಕಾರುತ್ತ, “ಆಗಲಿ, ಪಾಕಿಸ್ತಾನದವರೆಲ್ಲರಿಗೂ ಭಾರತೀಯ ಪೌರತ್ವ ನೀಡೋಣ”ಎಂದು ಗುಡುಗಿದ್ದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, “ಯಾವುದೇ ಕಾರಣಕ್ಕೂ, ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದಾರೆ.

ಏತನ್ಮಧ್ಯೆ, ದೆಹಲಿಯ ಸೀಲಾಂಪುರದಿಂದ ಹೊಸ ಘರ್ಷಣೆಗಳು ವರದಿಯಾಗಿವೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜಾಮಿಯಾ ದಬ್ಬಾಳಿಕೆಯನ್ನು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದೊಂದಿಗೆ 'ಸಮೀಕರಿಸಿದ್ದಾರೆ'.

ಸಿಎಎ ವಿರೋಧಿ ಪ್ರತಿಭಟನೆಗೆ ಅಮೆರಿಕಾದ 19 ವಿಶ್ವವಿದ್ಯಾಲಯಗಳು ಮತ್ತು ಇಂಗ್ಲೆಂಡ್‍ನ ಆಕ್ಸ್‍ ಫರ್ಡ್‍ ವಿವಿಯಲ್ಲಿ ಬೆಂಬಲಿಸಲಾಗಿದೆ.

ವಿಶ್ವಸಂಸ್ಥೆಯು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿ ತನ್ನ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಂತೆ ಭಾರತೀಯ ಅಧಿಕಾರಿಗಳನ್ನು ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com