ಮುಗ್ಗರಿಸಿ ಬಿದ್ದ ಪ್ರಧಾನಿ ಮೋದಿ: ಅಟಲ್ ಘಾಟ್ ಮೆಟ್ಟಿಲುಗಳ ದುರಸ್ತಿಗೆ ಮುಂದಾದ ಅಧಿಕಾರಿಗಳು

ಉತ್ತರಪ್ರದೇಶದ ಅಟಲ್ ಘಾಟ್'ನ ಮೆಟ್ಟಿಲು ಹತ್ತುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಗ್ಗರಿಸಿ ಬಿದ್ದ ಹಿನ್ನೆಲೆಯಲ್ಲಿ ಮೆಟ್ಚಿಲುಗಳ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಮುಗ್ಗರಿಸಿ ಬಿದ್ದ ಪ್ರಧಾನಿ ಮೋದಿ
ಮುಗ್ಗರಿಸಿ ಬಿದ್ದ ಪ್ರಧಾನಿ ಮೋದಿ

ಕಾನ್ಪುರ: ಉತ್ತರಪ್ರದೇಶದ ಅಟಲ್ ಘಾಟ್'ನ ಮೆಟ್ಟಿಲು ಹತ್ತುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಗ್ಗರಿಸಿ ಬಿದ್ದ ಹಿನ್ನೆಲೆಯಲ್ಲಿ ಮೆಟ್ಚಿಲುಗಳ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಕಳೆದ ವಾರ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿಯವರು ಕೇಂದ್ರ ಸಚಿವರು, ಸ್ಥಳೀಯ ಆಡಳಿತಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ಚರ್ಚೆ ಬಳಿಕ ನಮಾಮಿ ಗಂಗಾ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲಿಸಲು ಅಟಲ್ ಘಾಟ್'ಗೆ ತೆರಳಿದ್ದರು. ಈ ವೇಳೆ ಅಲ್ಲಿಂದ ವಾಪಸ್ ಬರುವಾಗ ಮೆಟ್ಟಿಲು ಹತ್ತುವ ವೇಳೆ ಮುಗ್ಗರಿಸಿ ಬಿದ್ದಿದ್ದರು. ಈ ವೇಳೆ ಸುತ್ತಲೂ ಇದ್ದ ಭದ್ರತಾ ಸಿಬ್ಬಂದಿ ನೆರವಿಗೆ ಬಂದು, ಮೋದಿಯವರನ್ನು ಹಿಡಿದು ಎತ್ತಿದ್ದರು.
 
ಘಟೆ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿಭಾಗೀಯ ಆಯುಕ್ತ ಸುಧೀರ್ ಎಂ.ಬೊಬ್ಡೆಯವರು, ಹಲವು ಮೆಟ್ಟಿಲುಗಳ ಪೈಕಿ ಒಂದೇ ಒಂದು ಮೆಟ್ಟಿಲಿನ ಎತ್ತರ ದೊಡ್ಡದಾಗಿದೆ. ಆ ಮೆಟ್ಟಿಲಿನ ದುರಸ್ತಿ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ಈ ಹಿಂದೆ ಕೂಡ ಹಲವು ಜನರೂ ಕೂಡ ಎಡವಿ ಬಿದ್ದಿರುವುದು ಕಂಡು ಬಂದಿತ್ತು ಎಂದು ಹೇಳಿದ್ದಾರೆ. 

ಮೆಟ್ಟಿಲುಗಳ ದುರಸ್ತಿ ಕಾರ್ಯವನ್ನು ಶೀಘ್ರಗತಿಯಲ್ಲಿ ಮಾಡುವಂತೆ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ವಕ್ತಾರ ತನ್ವೀರ್ ಮಾತನಾಡಿ, ಆದೇಶ ಬಂದಿದ್ದೇ ಆದರೆ, ಎಲ್ಲಾ ಮೆಟ್ಟಿಲುಗಳನ್ನು ಮರು ನಿರ್ಮಾಣ ಮಾಡಲಾಗುತ್ತದೆ. ಅಟಲ್ ಘಾಟ್ ಬಳಿ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಕೆಲ ಭಕ್ತರು ಆರತಿ ಮಾಡಲು ಸ್ಥಳ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಕುಳಿತುಕೊಂಡು ಪ್ರಾರ್ಥನೆ ಮಾಡಲು ಸ್ಥಳವಿಲ್ಲ ಎಂದು ಹೇಳಿದ್ದರು ಘಾಟ್ ಬಳಿ ಈಗಾಗಲೇ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿರುವುದರಿಂದ ಇದೀಗ ಒಂದು ಮೆಟ್ಟಿಲಿನ ಎತ್ತರವನ್ನು ಮಾತ್ರ ಕಡಿಮೆ ಮಾಡುವಂತ ಸೂಚಿಸಲಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com