ಮೂರು ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಹಿಂದಿರುವ ತರ್ಕವನ್ನು ಸರ್ಕಾರ ವಿವರಿಸಬೇಕು: ಕಾಂಗ್ರೆಸ್ ಒತ್ತಾಯ

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯು ಎಲ್ಲ ನಾಗರಿಕರು ಕಾನೂನಿನಡಿಯಲ್ಲಿ ಸಮಾನರು ಎಂಬ ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿರುವ ಕಾಂಗ್ರೆಸ್‌, ಈ ಕಾನೂನಿನ ವ್ಯಾಪ್ತಿಯಲ್ಲಿ ಮೂರು ದೇಶಗಳಿಂದ ಅಲ್ಪಸಂಖ್ಯಾತರನ್ನು ಮಾತ್ರ ಕರೆತರಲು ಯಾವ ಆಧಾರದ ಮೇಲೆ ಸರ್ಕಾರ ನಿರ್ಧರಿಸಿದೆ ಎಂಬುದನ್ನು ವಿವರಿಸಬೇಕು ಎಂದು ಬುಧವಾರ ಒತ್ತಾಯಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯು ಎಲ್ಲ ನಾಗರಿಕರು ಕಾನೂನಿನಡಿಯಲ್ಲಿ ಸಮಾನರು ಎಂಬ ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿರುವ ಕಾಂಗ್ರೆಸ್‌, ಈ ಕಾನೂನಿನ ವ್ಯಾಪ್ತಿಯಲ್ಲಿ ಮೂರು ದೇಶಗಳಿಂದ ಅಲ್ಪಸಂಖ್ಯಾತರನ್ನು ಮಾತ್ರ ಕರೆತರಲು ಯಾವ ಆಧಾರದ ಮೇಲೆ ಸರ್ಕಾರ ನಿರ್ಧರಿಸಿದೆ ಎಂಬುದನ್ನು ವಿವರಿಸಬೇಕು ಎಂದು ಬುಧವಾರ ಒತ್ತಾಯಿಸಿದೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಈ ಕಾನೂನನ್ನು ದೇಶಾದ್ಯಂತ ವಿರೋಧಿಸಲಾಗುತ್ತಿದೆ. ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ಘಟನೆಗಳು ಸಹ ನಡೆದಿವೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕವಾಗಿ ಕಿರುಕುಳಕ್ಕೊಳಗಾಗಿ ವಲಸೆ ಬಂದ ಹಿಂದೂ, ಪಾರ್ಸಿ, ಸಿಖ್, ಜೈನ್, ಬೌದ್ಧ ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವ ನೀಡಲು ಈ ಮಸೂದೆಯನ್ನು ಜಾರಿ ಮಾಡಿದ ಹಿಂದಿರುವ ತರ್ಕವನ್ನು ಸರ್ಕಾರ ವಿವರಿಸುತ್ತಿಲ್ಲ, ಇದಕ್ಕಾಗಿಯೇ ಮಸೂದೆಯನ್ನು ದೇಶಾದ್ಯಂತ ವಿರೋಧಿಸಲಾಗುತ್ತಿದೆ  ಎಂದು ಹೇಳಿದರು.

ನಾಗರಿಕತ್ವ (ತಿದ್ದುಪಡಿ) ಕಾಯ್ದೆ, 2019, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕವಾಗಿ ಕಿರುಕುಳಕ್ಕೊಳಗಾಗಿ 2014ರ ಡಿಸೆಂಬರ್ 31ರ ಮೊದಲು ದೇಶಕ್ಕೆ ಪ್ರವೇಶಿಸಿದ ಹಿಂದೂ, ಪಾರ್ಸಿ, ಸಿಖ್, ಜೈನ್, ಬೌದ್ಧ ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಪೌರತ್ವ ನೀಡಲು ಅವಕಾಶ ಕಲ್ಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com