ಪೌರತ್ವ ಕಾಯ್ದೆ ಪ್ರತಿಭಟನೆ: 10 ದಿನಗಳ ನಂತರ ಅಸ್ಸಾಂನಲ್ಲಿ ಇಂಟರ್ನೆಟ್ ಸೇವೆ ಮರು ಆರಂಭ 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಡಿಸೆಂಬರ್ 11ರಿಂದ ವ್ಯಾಪಕವಾದ ಪ್ರತಿಭಟನೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಅಸ್ಸಾಂನಲ್ಲಿ ಶುಕ್ರವಾರ ಇಂಟರ್ನೆಟ್ ಸೇವೆಯನ್ನು ಮರುಸ್ಥಾಪಿಸಲಾಗಿದೆ. 
ಅಸ್ಸಾಂನಲ್ಲಿ ಪ್ರತಿಭಟನೆ
ಅಸ್ಸಾಂನಲ್ಲಿ ಪ್ರತಿಭಟನೆ

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಡಿಸೆಂಬರ್ 11ರಿಂದ ವ್ಯಾಪಕವಾದ ಪ್ರತಿಭಟನೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಅಸ್ಸಾಂನಲ್ಲಿ ಶುಕ್ರವಾರ ಇಂಟರ್ನೆಟ್ ಸೇವೆಯನ್ನು ಮರುಸ್ಥಾಪಿಸಲಾಗಿದೆ.


ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ಹಿನ್ನಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ಡಿಸೆಂಬರ್ 16ರಂದು ಸ್ಥಗಿತವನ್ನು ಮತ್ತೆ 24 ಗಂಟೆಗಳ ಕಾಲ ಇನ್ನೂ 10 ಜಿಲ್ಲೆಗಳಿಗೆ ವಿಸ್ತರಿಸಲಾಗಿತ್ತು. 


ಇದೀಗ ಪರಿಸ್ಥಿತಿ ಅಸ್ಸಾಂನಲ್ಲಿ ಸಾಕಷ್ಟು ಸುಧಾರಿಸಿದ್ದು, ರಾಜ್ಯದ ಜನತೆ ಕಾನೂನನ್ನು ಪಾಲಿಸುತ್ತಿದ್ದಾರೆ. ಕಳೆದ 16ರಂದು ಗುವಾಹಟಿಯಲ್ಲಿ ದಿನದ ಕರ್ಫ್ಯೂವನ್ನು ಹಿಂತೆಗೆದುಕೊಳ್ಳಲಾಗಿದೆ. ರಾತ್ರಿಯ ಕರ್ಫ್ಯೂ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಮುಂದುವರಿಸಲಾಗಿತ್ತು ಎಂದು ಅಸ್ಸಾಂ ಪೊಲೀಸರು ಟ್ವೀಟ್ ಮಾಡಿದ್ದಾರೆ.


ಈ ಮಧ್ಯೆ, ಮೊಬೈಲ್ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಗಳನ್ನು ಲಕ್ನೊ ನಗರದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ಮುಂದುವರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com