ದಾದ್ರಾ ನಗರ್ ಹವೇಲಿ, ಡಮನ್ – ಡಿಯು ಕೇಂದ್ರಾಡಳಿತ ಪ್ರದೇಶಗಳು ವಿಲೀನ 

ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ನಗರ್ ಹವೇಲಿ ಮತ್ತು ಡಿಯು-ಡಮನ್ ಜನವರಿ 26 ರಂದು ಒಂದೇ ಕೇಂದ್ರಾಡಳಿತ ಪ್ರದೇಶವಾಗಿ ವಿಲೀನವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಗುರುವಾರ ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ನಗರ್ ಹವೇಲಿ ಮತ್ತು ಡಿಯು-ಡಮನ್ ಜನವರಿ 26 ರಂದು ಒಂದೇ ಕೇಂದ್ರಾಡಳಿತ ಪ್ರದೇಶವಾಗಿ ವಿಲೀನವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಗುರುವಾರ ಘೋಷಿಸಿದೆ.


ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಹೊರಡಿಸಿರುವ ವಿಶೇಷ ಗೆಜೆಟ್ ಪ್ರಕಟಣೆಯಲ್ಲಿ ಜನವರಿ 26 ರಂದು ಈ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ವಿಲೀನಗೊಳಿಸಲಾಗುವುದು ಎಂದು ಘೋಷಿಸಲಾಗಿದೆ. ಈ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ವಿಲೀನಗೊಳಿಸುವ ವಿಧೇಯಕಕ್ಕೆ ಡಿ 3 ರಂದು ಸಂಸತ್ತಿನ ಅಂಗೀಕಾರ ದೊರೆತಿದೆ.


ವಿಲೀನದ ನಂತರ ಹೊಸ ಕೇಂದ್ರಾಳಿತ ಪ್ರದೇಶಕ್ಕೆ ದಾದ್ರಾ ಮತ್ತು ನಗರ್ ಹವೇಲಿ ಹಾಗೂ ಡಮನ್ ಮತ್ತು ಡಿಯು ಎಂದು ಕರೆಯಲಾಗುವುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com