ದೆಹಲಿಯಲ್ಲಿ ಮತ್ತೆ ಪ್ರತಿಭಟನೆಯ ಕಿಚ್ಚು: ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠ ಸೇರಿ ಹಲವರ ಬಂಧನ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಸುತ್ತಿನ ಪ್ರತಿಭಟನೆ ತೀವ್ರವಾಗಿದ್ದು ನಗರದ ಜಮಾ ಮಸೀದಿ ಬಳಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ವ್ಯಾಪಕವಾಗಿ ಹಬ್ಬಿತು.
ಚಂದ್ರಶೇಖರ್ ಆಜಾದ್
ಚಂದ್ರಶೇಖರ್ ಆಜಾದ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಸುತ್ತಿನ ಪ್ರತಿಭಟನೆ ತೀವ್ರವಾಗಿದ್ದು ನಗರದ ಜಮಾ ಮಸೀದಿ ಬಳಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ವ್ಯಾಪಕವಾಗಿ ಹಬ್ಬಿತು.


ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಪ್ರತಿಭಟನಾಕಾರರ ಜೊತೆಗೆ ಸೇರಿ ಮಸೀದಿಯಿಂದ ಜಂತರ್ ಮಂತರ್ ವರೆಗೆ ಮೆರವಣಿಗೆ ಸಾಗಲು ಯತ್ನಿಸಿದಾಗ ಪೊಲೀಸರ ನಿರ್ಬಂಧಿಸಿದರು.


ಚವ್ರಿ ಬಜಾರ್, ಲಾಲ್ ಖಿಲಾ ಮತ್ತು ಜಮಾ ಮಸೀದಿ ಮೆಟ್ರೊ ನಿಲ್ದಾಣದ ಒಳ ಮತ್ತು ಹೊರ ಪ್ರವೇಶದ ಗೇಟ್ ಬಳಿ ಪ್ರತಿಭಟನಾಕಾರರು ಜಮಾಯಿಸಿದರು. ಈ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿಲ್ಲ. 


ಇದಕ್ಕೂ ಮುನ್ನ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುತ್ರಿ ಶರ್ಮಿಷ್ಟ ಮುಖರ್ಜಿ ಹಾಗೂ ಇತರ 49 ಮಂದಿ ಪ್ರತಿಭಟನಾಕಾರರು ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದರು.


ಇಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹೊರಗೆ ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರು ನಿಶ್ಚಯಿಸಿದ್ದು ಅಲ್ಲಿ ಇಂದು ದಿನವಿಡೀ ವಿವಿಧ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇಂದು ಶುಕ್ರವಾದ್ದರಿಂದ ಮಸೀದಿ ಹೊರಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com