ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಭೂಕಂಪ; ದೆಹಲಿಯಲ್ಲಿ ಕಂಪನದ ಅನುಭವ

ರಾಷ್ಟ್ರರಾಜಧಾನಿ ದೆಹಲಿ  ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪದ ಅನುಭವವಾಗಿದೆ

Published: 20th December 2019 07:30 PM  |   Last Updated: 20th December 2019 07:30 PM   |  A+A-


Casual_photos1

ಸಾಂದರ್ಭಿಕ ಚಿತ್ರಗಳು

Posted By : Nagaraja AB
Source : UNI

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ  ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪದ ಅನುಭವವಾಗಿದೆ.

ಅಫ್ಘಾನಿಸ್ತಾನದ ಹಿಂದೂಕುಷ್ ಪ್ರದೇಶದಲ್ಲಿ ಶುಕ್ರವಾರ ಸಂಜೆ 6.3 ತೀವ್ರತೆಯ ಭೂಕಂಪವಾಗಿದ್ದು ಇದರ ಪರಿಣಾಮ ಭಾರತದಲ್ಲೂ ಕಂಪನದ ಅನುಭವವಾಗಿದೆ.

ಅಫ್ಘಾನಿಸ್ತಾನದ ಹಿಂದೂಕುಷ್ ಪ್ರದೇಶದಲ್ಲಿ ಸಂಜೆ 5.09 ರ ಸುಮಾರಿಗೆ ಭೂಮಿ ಕಂಪಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ರಷ್ಟಿದ್ದು 190 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಯಾವುದೇ ಸಾವು – ನೋವಿನ ವರದಿ ಲಭ್ಯವಾಗಿಲ್ಲ.
 

Stay up to date on all the latest ರಾಷ್ಟ್ರೀಯ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp