ಸಿಎಎ ವಿರೋಧಿ ಪ್ರತಿಭಟನೆಯಲ್ಲಾದ ಹಿಂಸಾಚಾರದಿಂದ ನನಗೆ ನೋವಾಗಿದೆ: ರಜನಿಕಾಂತ್

ಸೂಪರ್ ಸ್ಟಾರ್ ರಜಿನಿಕಾಂತ್ ಕೊನೆಗೂ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮೌನ ಮುರಿದಿದ್ದು ಹಿಂಸಾಚಾರವೊಂದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಟ್ವೀಟ್ ಮಾಡಿದ್ದಾರೆ . 

Published: 20th December 2019 12:48 PM  |   Last Updated: 20th December 2019 12:48 PM   |  A+A-


Rajani kanth

ರಜನಿಕಾಂತ್

Posted By : Shilpa D
Source : PTI

ತಮಿಳುನಾಡು : ಸೂಪರ್ ಸ್ಟಾರ್ ರಜಿನಿಕಾಂತ್ ಕೊನೆಗೂ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮೌನ ಮುರಿದಿದ್ದು ಹಿಂಸಾಚಾರವೊಂದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಟ್ವೀಟ್ ಮಾಡಿದ್ದಾರೆ . 

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ದೇಶದ್ಯಾಂತ ನಡೆಯುತ್ತಿರುವ ಪ್ರತಿಭಟನೆಯ ನನಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಆದರೆ ಅವರು ಯಾವುದೇ ಒಂದು ನಿರ್ದಿಷ್ಟ ಹಿಂಸಾಚಾರದ ಬಗ್ಗೆ ಹೇಳದೇ ಸದ್ಯ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಉಂಟಾಗುತ್ತಿರುವ ಹಿಂಸಾಚಾರ ನನಗೆ ನೋವು ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಹಿಂಸಾಚಾರ ಮತ್ತು ಗಲಭೆಯೊಂದೇ ಸಮಸ್ಯೆಗಳಿಗೆ ಪರಹಾರವಲ್ಲ,ಭಾರತೀಯ ನಾಗರಿಕರು ರಾಷ್ಟ್ರದ ಭದ್ರತೆ ಮತ್ತು ಕಲ್ಯಾಣದ ಕುರಿತು  ಒಗ್ಗಟ್ಟಿನಿಂದಿರಬೇಕು ಮತ್ತು ಜಾಗೃತರಾಗಿರಬೇಕು. ಆದರೇ ದೇಶಾದ್ಯಂತ ಹಿಂಸಾಚಾರವಾಗುತ್ತಿರುವುದು ಕಂಡು ನಾನು ತುಂಬಾ ದುಃಖಿತನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp