ನಾಯರ್ ಮಹಿಳೆಯರ ಕುರಿತು ಅವಹೇಳನ: ಶಶಿ ತರೂರ್'ಗೆ ಬಂಧನ ವಾರಂಟ್

30 ವರ್ಷಗಳ ಹಿಂದೆ ಬರೆದಿದ್ದ ಪುಸ್ತಕವೊಂದರಲ್ಲಿ ನಾಯರ್ ಮಹಿಳೆಯರ ಬಗ್ಗೆ ಅಪಮಾನಕಾರಿ ಅಂಶ ಉಲ್ಲೇಖಿಸಿದ್ದಾರೆಂಬ ಪ್ರಕರಣ ಸಂಬಂಧ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಕೇರಳ ನ್ಯಾಯಾಲಯವೊಂದು ಬಂಧನ ವಾರಂಟ್ ಜಾರಿ ಮಾಡಿದೆ. 
ಶಶಿ ತರೂರ್
ಶಶಿ ತರೂರ್

ತಿರುವನಂತಪುರ: 30 ವರ್ಷಗಳ ಹಿಂದೆ ಬರೆದಿದ್ದ ಪುಸ್ತಕವೊಂದರಲ್ಲಿ ನಾಯರ್ ಮಹಿಳೆಯರ ಬಗ್ಗೆ ಅಪಮಾನಕಾರಿ ಅಂಶ ಉಲ್ಲೇಖಿಸಿದ್ದಾರೆಂಬ ಪ್ರಕರಣ ಸಂಬಂಧ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಕೇರಳ ನ್ಯಾಯಾಲಯವೊಂದು ಬಂಧನ ವಾರಂಟ್ ಜಾರಿ ಮಾಡಿದೆ. 

ಸಮನ್ಸ್ ಜಾರಿಮಾಡಿದ್ದರೂ ವಿಚಾರಣೆಗೆ ಹಾಜರಾಗದ ಹಾಗೂ ತಮ್ಮ ವಕೀಲರನ್ನೂ ಕೋರ್ಟಿಗೆ ಕಳುಹಿಸಿದ ಕಾರಣ ಈ ವಾರಂಟ್ ಜಾರಿ ಆಗಿದೆ. 

1989ರಲ್ಲಿ ತರೂರ್'ರ ದ ಗ್ರೇಟ್ ಇಂಡಿಯನ್ ನಾವಲ್ ಪುಸ್ತಕದಲ್ಲಿ ನಾಯರ್ ಮಹಿಳೆಯರ ಬಗ್ಗೆ ಅಪಮಾನಕಾರಿ ಅಂಶಗಳಿದ್ದವು. ಈ ಸಂಬಂಧ ವಿಚಾರಣೆ ನಡೆಯುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com