ಪೌರತ್ವ ಪಡೆಯುವ ನಿರಾಶ್ರಿತರು ಮೂಲ ದೇಶಕ್ಕೆ ಭೇಟಿ ನೀಡುವಂತಿಲ್ಲ: ಕೇಂದ್ರ ಸರ್ಕಾರ 

ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ 2019ರ ನಿಯಮದಡಿ ಭಾರತದ ಪೌರತ್ವ ಪಡೆಯಲು ಅರ್ಹರಾಗುವ ನಾಗರಿಕರಿಗೆ ಕೆಲವೊಂದು ನಿರ್ಬಂಧಗಳಿರುತ್ತವೆ, ಈ ಕಾಯ್ದೆಯನ್ನು ಯಾವುದೇ ರೀತಿಯಲ್ಲಿಯೂ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.
ದೆಹಲಿಯ ಜಾಮಿಯಾ ಮಿಲಿಯಾ ವಿವಿ ಹೊರಗೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಪ್ರತಿಭಟನೆ
ದೆಹಲಿಯ ಜಾಮಿಯಾ ಮಿಲಿಯಾ ವಿವಿ ಹೊರಗೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಪ್ರತಿಭಟನೆ

ನವದೆಹಲಿ: ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ 2019ರ ನಿಯಮದಡಿ ಭಾರತದ ಪೌರತ್ವ ಪಡೆಯಲು ಅರ್ಹರಾಗುವ ನಾಗರಿಕರಿಗೆ ಕೆಲವೊಂದು ನಿರ್ಬಂಧಗಳಿರುತ್ತವೆ, ಈ ಕಾಯ್ದೆಯನ್ನು ಯಾವುದೇ ರೀತಿಯಲ್ಲಿಯೂ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.


ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ನಿಯಮ ರೂಪಿಸುವಲ್ಲಿ ನಿಧಾನ ಮಾಡುತ್ತಿದ್ದರೂ ಕೂಡ ಕಾನೂನನ್ನು ಜಾರಿಗೆ ತರಲು ಗೃಹ ಸಚಿವಾಲಯ ಮತ್ತು ಕಾನೂನು ಸಚಿವಾಲಯ ಒಟ್ಟಿಗೆ ಕೆಲಸ ಮಾಡುತ್ತಿದೆ. ಕಾಯ್ದೆಯಿಂದ ಪ್ರಯೋಜನ ಪಡೆದುಕೊಳ್ಳುವ ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನಗಳ ನಿರಾಶ್ರಿತರಿಗೆ ಕೆಲವೊಂದು ಷರತ್ತು ಮತ್ತು ನಿರ್ಬಂಧಗಳನ್ನು ಕೇಂದ್ರ ಸರ್ಕಾರ ವಿಧಿಸಲಿದೆ.


ಭಾರತ ಮತ್ತು ನೆರೆ ದೇಶಗಳಿಂದ ಬಂದ ನಿರಾಶ್ರಿತರಿಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಅದರಲ್ಲಿ ಒಂದು ಷರತ್ತು, ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತದ ಪೌರತ್ವ ಕೋರುವ ನಿರಾಶ್ರಿತರು ತಮ್ಮ ಪೂರ್ವ ದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗದಿರಬಹುದು. ಇದು ಭದ್ರತೆ ಕಾರಣದಿಂದ ಇರಬಹುದು ಎಂದು ಮೂಲಗಳು ಹೇಳುತ್ತವೆ.


ಆದರೆ ತಾವು ನಿರಾಶ್ರಿತರು ಎಂದು ಹೇಳಿಕೊಂಡು ಭಾರತದ ಪೌರತ್ವಕ್ಕೆ ಅರ್ಜಿ ಹಾಕುವವರಿಗೆ ಹಲವು ದಾಖಲೆಗಳನ್ನು ಕೇಳಲಿಕ್ಕಿಲ್ಲ. ದೇಶವಿರೋಧಿ ವಿಷಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದ್ದು ಪೌರತ್ವ ತಿದ್ದುಪಡಿ ಕಾಯ್ದೆಯ ಸಾಧ್ಯತೆಗಳನ್ನು ಸರ್ಕಾರ ಸಡಿಲಗೊಳಿಸುವ ಸಾಧ್ಯತೆಯಿದೆ.


ಭಾರತದ ನೆರೆ ದೇಶಗಳಿಂದ ಬಂದಿರುವ ಹಿಂದೂ, ಸಿಖ್, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಭಾರತದ ಪೌರತ್ವ ಸಿಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. 


ಪಾಕಿಸ್ತಾನ, ಬಾಂಗ್ಲಾ ಮತ್ತು ಆಫ್ಘಾನಿಸ್ತಾನಗಳ ಮುಸ್ಲಿಮೇತರರ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಸ್ವೀಕರಿಸುತ್ತೇವೆ. ಅವರು ನೀಡಿರುವ ದಾಖಲೆಗಳನ್ನು ಪರಿಶೀಲಿಸಲು ನಿರ್ದಿಷ್ಟ ಪ್ರಾಧಿಕಾರಗಳು ಇರುತ್ತವೆ.ಅವರು ಧಾರ್ಮಿಕ ಹಿಂಸೆಗೆ ಒಳಗಾಗಿದ್ದರೇ ಎಂದು ನೋಡಲು ಯಾವುದೇ ದಾಖಲೆಗಳು ಬೇಕಾಗಿಲ್ಲ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com