ದೇಶದ ಜನರನ್ನೇಕೆ ಹಾದಿ ತಪ್ಪಿಸುತ್ತೀರಿ, ಸರ್ಕಾರ ಜನರಲ್ಲಿ ಜಾತಿ, ಧರ್ಮ ಕೇಳಿದೆಯೇ?: ಪ್ರಧಾನಿ ಮೋದಿ 

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶದ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತರಲಾಗಿದೆ. ಇದರಿಂದ ಸಮಾಜದ ದೀನದಲಿತರು,ಬಡವರ್ಗದವರು ಮತ್ತು ಶೋಷಣೆಗೊಳಗಾದವರ ಉದ್ಧಾರವಾಗಲಿದೆ. ಆದರೆ ಕೆಲವು ರಾಜಕೀಯ ಪಕ್ಷಗಳು ಇದರ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ದೇಶದ ಜನರನ್ನೇಕೆ ಹಾದಿ ತಪ್ಪಿಸುತ್ತೀರಿ, ಸರ್ಕಾರ ಜನರಲ್ಲಿ ಜಾತಿ, ಧರ್ಮ ಕೇಳಿದೆಯೇ?: ಪ್ರಧಾನಿ ಮೋದಿ 

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶದ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತರಲಾಗಿದೆ. ಇದರಿಂದ ಸಮಾಜದ ದೀನದಲಿತರು,ಬಡವರ್ಗದವರು ಮತ್ತು ಶೋಷಣೆಗೊಳಗಾದವರ ಉದ್ಧಾರವಾಗಲಿದೆ. ಆದರೆ ಕೆಲವು ರಾಜಕೀಯ ಪಕ್ಷಗಳು ಇದರ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.


ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಜನತಾ ಪಕ್ಷ ಏರ್ಪಡಿಸಿರುವ ಬೃಹತ್ ವಿಶಾಲ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಸಹಜವಾಗಿಯೇ ದೇಶಾದ್ಯಂತ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ, ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದರು.


ಕಳೆದ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅನುಮೋದಿಸಲಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆಯಾಗಿ ಕಾಯ್ದೆಯಾಗಿ ಜಾರಿಗೆ ಬಂದಿದ್ದು, ಜನರ ತೀರ್ಪನ್ನು ಮತ್ತು ಸಂಸತ್ತನ್ನು ಎಲ್ಲರೂ ಗೌರವಿಸಬೇಕು.


ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವಾಗ ಮತ್ತು ಸೌಲಭ್ಯವನ್ನು ಹಂಚುವಾಗ ಜನರಲ್ಲಿ ಜಾತಿ, ಧರ್ಮ ಕೇಳಿದ್ದೇವೆಯೇ? ಎಲ್ಲರನ್ನೊಳಗೊಂಡ ಎಲ್ಲರ ವಿಕಾಸ ಎಂಬ ಮಂತ್ರದಲ್ಲಿ ನಂಬಿಕೆ ಇಟ್ಟವರು ನಾವು.  ಪ್ರಧಾನಿಯಾದ ನಂತರ ನಾನು ಮಾಡಿರುವ ಕೆಲಸಗಳನ್ನು ಪರೀಕ್ಷಿಸಿ ಎಂದು ಪ್ರತಿಪಕ್ಷದವರಿಗೆ ನಾನು ಸವಾಲು ಹಾಕುತ್ತೇನೆ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಬಡವರಿಗೆ ಸಹಾಯವಾಯಿತು, ಆ ಯೋಜನೆ ನೀಡುವಾಗ ನೀವು ಯಾವ ಜಾತಿ, ಯಾವ ಧರ್ಮ ಎಂದು ಕೇಳಲಿಲ್ಲ, ಹೀಗಿರುವಾಗ ನೀವು ನಮ್ಮನ್ನು ಇಷ್ಟೊಂದು ಏಕೆ ದ್ವೇಷಿಸುತ್ತಿದ್ದೀರಿ, ನೀವು ಜನರನ್ನು ಏಕೆ ಹಾದಿತಪ್ಪಿಸುತ್ತೀರಿ, ಇದರಿಂದ ನಿಮಗೆ ಏನು ಲಾಭವಿದೆ ಎಂದು ವಿರೋಧ ಪಕ್ಷದವರನ್ನು ಮೋದಿ ತರಾಟೆ ತೆಗೆದುಕೊಂಡರು.


ಕೆಲವು ರಾಜಕೀಯ ಪಕ್ಷಗಳು ಸುಮ್ಮನೆ ವದಂತಿ ಹಬ್ಬಿಸುತ್ತಿದೆ. ಜನರಲ್ಲಿ ಪ್ರಚೋದನೆ ಹುಟ್ಟಿಸಿ ತಪ್ಪುದಾರಿಗೆಳೆಯುತ್ತಿದ್ದಾರೆ. ದೆಹಲಿಯಲ್ಲಿ ಅನಧಿಕೃತ ಕಾಲೊನಿಗಳನ್ನು ಅಧಿಕೃತಗೊಳಿಸುವಾಗ ಅವರಲ್ಲಿ ಜಾತಿ, ಧರ್ಮ ಕೇಳಿದ್ದೇವೆಯೇ, ನೀವು ಯಾವ ಪಕ್ಷವನ್ನು ಬೆಂಬಲಿಸುತ್ತೀರಿ ಎಂದು ಕೇಳಿದ್ದೇವೆಯೇ, 1970, 1980ರ ಅವರ ದಾಖಲೆಗಳನ್ನು ಕೇಳಿದ್ದೇವೆಯೇ ಎಂದು ರ್ಯಾಲಿಯಲ್ಲಿ ಪ್ರತಿಪಕ್ಷಗಳನ್ನು ಪ್ರಧಾನಿ ತರಾಟೆಗೆ ತೆಗೆದುಕೊಂಡರು.


ಅತ್ಯುನ್ನತ ಅಧಿಕಾರದಲ್ಲಿರುವವರು ನಕಲಿ ವಿಡಿಯೊಗಳನ್ನು ಹಂಚಿ ಜನರನ್ನು ಗಲಭೆ ಎಬ್ಬಿಸುವಂತೆ ಪ್ರಚೋದಿಸುತ್ತಿದ್ದಾರೆ. 

ಪ್ರಧಾನಿ ಭಾಷಣದ ಮುಖ್ಯಾಂಶಗಳು: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ.


ದೆಹಲಿಯಲ್ಲಿ ಇಷ್ಟೊಂದು ಹಿಂಸಾಚಾರವಾದರೂ ಕೂಡ ಆಡಳಿತಾರೂಢ ಪಕ್ಷದಿಂದ ಶಾಂತಿ ಕಾಪಾಡುವಂತೆ ಯಾವುದೇ ಕರೆ ಕೊಟ್ಟಿಲ್ಲ, ಅಂದರೆ ಹಿಂಸಾಚಾರವನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದಲ್ಲವೇ?


ಸ್ವಾತಂತ್ರ್ಯ ನಂತರ ದೇಶ ಸೇವೆಯಲ್ಲಿರುವಾಗ 33 ಸಾವಿರ ಪೊಲೀಸರು ಪ್ರಾಣದಾನ ಮಾಡಿದ್ದಾರೆ, ಆದರೆ ಇಂದು ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದಾಳಿ ಮಾಡಲಾಗುತ್ತಿದೆ.


ನನ್ನ ಮೇಲೆ ದ್ವೇಷವಿದ್ದರೆ ವಿರೋಧಪಕ್ಷಗಳು ನನ್ನ ಪ್ರತಿಕೃತಿ ದಹಿಸಲಿ, ಆದರೆ ಬಡವರ ಮೇಲೆ ದಾಳಿ ಮಾಡಬೇಡ, ಅವರ ಜೀವನಕ್ಕೆ ತೊಂದರೆ ಮಾಡಬೇಡಿ, 


ದೇಶದಲ್ಲಿ ಗಲಭೆ, ಭಯದ ವಾತಾವರಣ ಸೃಷ್ಟಿಸಿ ಜಗತ್ತಿನ ಮುಂದೆ ಭಾರತವನ್ನು ಅಪಮಾನ ಮಾಡಬೇಕೆಂದು ವಿರೋಧ ಪಕ್ಷಗಳು ಬಯಸುತ್ತಿವೆ.


ಮುಸಲ್ಮಾನರನ್ನು ತಪ್ಪು ಸಂದೇಶ ನೀಡಿ ಹಾದಿತಪ್ಪಿಸಲಾಗುತ್ತಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com