ಜಾರ್ಖಂಡ್ ಜನರಿಂದ ಪ್ರಧಾನಿ ಮೋದಿ, ಅಮಿತ್ ಶಾಗೆ ಗರ್ವಭಂಗ: ಎನ್‌ಸಿಪಿ-ಶಿವಸೇನೆ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತೀಯ ಜನತಾ ಪಕ್ಷಕ್ಕೆ ನೀಡಿರುವ ಕಪಾಳ ಮೋಕ್ಷ ಎಂದು ಎನ್‌ಸಿಪಿ-ಶಿವಸೇನೆ ಬಣ್ಣಿಸಿವೆ.

Published: 23rd December 2019 04:57 PM  |   Last Updated: 23rd December 2019 04:57 PM   |  A+A-


PM Modi-Amit Shah-uddhav

ಪಿಎಂ ಮೋದಿ-ಅಮಿತ್ ಶಾ-ಉದ್ಧವ್

Posted By : Vishwanath S
Source : UNI

ಮುಂಬೈ: ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತೀಯ ಜನತಾ ಪಕ್ಷಕ್ಕೆ ನೀಡಿರುವ ಕಪಾಳ ಮೋಕ್ಷ ಎಂದು ಎನ್‌ಸಿಪಿ-ಶಿವಸೇನೆ ಬಣ್ಣಿಸಿವೆ.
 
ಬಿಜೆಪಿಯ ಮೇಲೆ  ದೇಶದ  ಜನರ ವಿಶ್ವಾಸ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಜಾರ್ಖಂಡ್ ಜನರು ಗರ್ವ ಭಂಗ ಮಾಡಿದ್ದಾರೆ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಹೇಳಿದ್ದಾರೆ. 

ಜಾರ್ಖಂಡ್‌ನ ಜನರು ಮೋದಿ,  ಅಮಿತ್ ಶಾ  ಅಹಂಕಾರಕ್ಕೆ ತಕ್ಕ ಪಾಠ ಕಲಿಸಿ, ಪ್ರಜಾಸತ್ತೆಯನ್ನು ಗೆಲ್ಲಿಸಿದ್ದಾರೆ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ವಿಫಲವಾಗಿದ್ದ ಬಿಜೆಪಿ ಮೇಲೆ ಜನರ ವಿಶ್ವಾಸ  ಕ್ಷೀಣಿಸುತ್ತಿದೆ ಎಂದು ಶಿವಸೇನೆ ವಕ್ತಾರೆ ಮನೀಶಾ ಕಾಯಂಡೆ ಹೇಳಿದ್ದಾರೆ. 

ಅವರು(ಬಿಜೆಪಿ) ಅಭಿವೃದ್ಧಿ ರಾಜಕಾರಣ ಮಾತ್ರ ಎಂದು ಹೇಳಿಕೊಂಡು, ಭಾವನೆಗಳ ಪ್ರಚೋದಿಸುವ ಮೂಲಕ ದೇಶದ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಪ್ರಯತ್ನವಾಗಿ. ಎನ್‌ಆರ್‌ಸಿಯಂತಹ ವಿಷಯಗಳನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಮನೀಷಾ ಹೇಳಿದ್ದಾರೆ. 

ಪ್ರಧಾನಿ ಮೋದಿ, ಅಮಿತ್ ಶಾ ಎಷ್ಟೇ  ಹೆಣಗಾಡಿದರೂ ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್ ಲೇವಡಿ ಮಾಡಿದ್ದಾರೆ.

ಜಾರ್ಖಂಡ್ ವಿಧಾನಸಭಾ ಮತಗಳ ಎಣಿಕೆ ಮುಂದುವರಿದಿದ್ದು, ಇತ್ತೀಚಿನ ಪ್ರವೃತ್ತಿಗಳ ಪ್ರಕಾರ, ಜೆಎಂಎಂ-ಕಾಂಗ್ರೆಸ್-ಆರ್ ಜೆಡಿ ಮೈತ್ರಿಕೂಟ 46 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅತಿ ಮೈತ್ರಿಕೂಟವಾಗಿದೆ. 24 ಸ್ಥಾನಗಳೊಂದಿಗೆ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಎಜೆಎಸ್‌ಯು 4, ಜೆವಿಎಂ 3 ಮತ್ತು ಇತರರು 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪೂರ್ಣ ಫಲಿತಾಂಶಗಳು ಇನ್ನೂ ಘೋಷಣೆಯಾಗಿಲ್ಲ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp