ಹಿನ್ನೋಟ 2019: ಹೆಚ್ಚು ಸುದ್ದಿ ಮಾಡಿದ ಸುಪ್ರೀಂ ಕೋರ್ಟ್ ತೀರ್ಪುಗಳು 

2019ನೇ ವರ್ಷ ಹಲವು ಪ್ರಮುಖ ತೀರ್ಪುಗಳಿಗೆ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು. ಸುಪ್ರೀಂ ಕೋರ್ಟ್ ನ ಹಿಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನಿವೃತ್ತಿಯಾಗುವುದಕ್ಕೆ ಮುನ್ನ ಹಲವು ಮಹತ್ವ ತೀರ್ಪು ನೀಡಿ ಸೇವೆಯಿಂದ ನಿರ್ಗಮಿಸಿದರು. 
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

2019ನೇ ವರ್ಷ ಹಲವು ಪ್ರಮುಖ ತೀರ್ಪುಗಳಿಗೆ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು. ಸುಪ್ರೀಂ ಕೋರ್ಟ್ ನ ಹಿಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನಿವೃತ್ತಿಯಾಗುವುದಕ್ಕೆ ಮುನ್ನ ಹಲವು ಮಹತ್ವ ತೀರ್ಪು ನೀಡಿ ಸೇವೆಯಿಂದ ನಿರ್ಗಮಿಸಿದರು. ಈ ತೀರ್ಪುಗಳು ದೇಶಮಟ್ಟದಲ್ಲಿ ಭಾರೀ ಸುದ್ದಿಯಾದವು. ಅವುಗಳಲ್ಲಿ ಪ್ರಮುಖವಾದವು:

ಅಯೋಧ್ಯೆ ತೀರ್ಪು: ಶತಮಾನದ ಅಯೋಧ್ಯೆ ಭೂ ವಿವಾದಕ್ಕೆ ಅಂತ್ಯ ಹಾಡಿರುವ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ವಿವಾದಿತ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಉಚ್ಛ ನ್ಯಾಯಾಲಯ, ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಮೀನು ನೀಡಲು ತನ್ನ ತೀರ್ಪಿನಲ್ಲಿ ಕಳೆದ ನವೆಂಬರ್ 9ರಂದು ಆದೇಶಿಸಿದೆ.


ಈ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ಹಿಂದಿನ ಸಿಜೆಐ ರಂಜನ್ ಗೋಗೊಯಿ, ಜಸ್ಟೀಸ್ ಎಸ್ ಎ ಬೋಬ್ಡೆ, ಜಸ್ಟೀಸ್ ಡಿವೈ ಚಂದ್ರಚೂಡ್, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಅಬ್ದುಲ್ ನಝೀರ್ ನೇತೃತ್ವದ ಪಂಚ ಪೀಠ ಕೇಂದ್ರ ಸರ್ಕಾರಕ್ಕೆ 3 ತಿಂಗಳೊಳಗೆ ಟ್ರಸ್ಟ್ ಸ್ಥಾಪಿಸುವಂತೆ ಹೇಳಿತು. ಆ ಟ್ರಸ್ಟ್ ಅಯೋಧ್ಯೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತದೆ. ಈ ತೀರ್ಪನ್ನು ಹಿಂದೂ-ಮುಸ್ಲಿಂರು ಶಾಂತಿಯುತವಾಗಿ ಸ್ವೀಕರಿಸಿದರೆ ಕೆಲವರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರು.


ರಫೆಲ್ ಪುನರ್ ಪರಿಶೀಲನಾ ಅರ್ಜಿ: ಫ್ರಾನ್ಸ್ ನ ಡಸ್ಸ್ಸೌಲ್ಟ್ ವಿಮಾನಯಾನದ ಜೊತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾಡಿಕೊಂಡಿದ್ದ ರಫೆಲ್ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 2018ರಲ್ಲಿ ಕ್ಲೀನ್ ಚಿಟ್ ನೀಡಿತ್ತು. ಆ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮರು ಅರ್ಜಿ ಸಲ್ಲಿಸಲಾಗಿತ್ತು. ಆ ಅರ್ಜಿ ಕೂಡ ಕಳೆದ ನವೆಂಬರ್ 14ರಂದು ವಜಾಗೊಂಡಿತ್ತು. ಈ ವಿವಾದದಲ್ಲಿ ಎಫ್ ಐಆರ್ ಸಲ್ಲಿಸುವ ಯಾವುದೇ ಅಂಶ ಕಂಡುಬರುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.

ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಕೇಸು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚೌಕಿದಾರ್ ಚೋರ್ ಹೈ ಹೇಳಿಕೆಯನ್ನು ತಪ್ಪಾಗಿ ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ  ನ್ಯಾಯಾಂಗ ನಿಂದನೆ ಕೇಸಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತು. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆ ನೀಡುವಾಗ ಜಾಗ್ರತರಾಗಿರುವಂತೆ ಹೇಳಿತು.


ಶಬರಿಮಲೆ ಪುನರ್ ಪರಿಶೀಲನಾ ಮನವಿ: ಕಳೆದ ನವೆಂಬರ್ 14ರಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಶಬರಿಮಲೆ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಯನ್ನು ಏಳು ನ್ಯಾಯಾಧೀಶರನ್ನೊಳಗೊಂಡ ವಿಸ್ತೃತ ಪೀಠಕ್ಕೆ ಹೆಚ್ಚಿನ ವಿಚಾರಣೆಗೆ ವರ್ಗಾಯಿಸಿದೆ. ಜನರ ಧಾರ್ಮಿಕ ನಂಬಿಕೆಗಳಿಗೆ ಸಂಬಂಧಪಟ್ಟಂತೆ ತೀರ್ಪು ನೀಡುವಾಗ ಹೆಚ್ಚು ಜಾಗ್ರತವಾಗಬೇಕಿದ್ದು, ಮಸೀದಿಗಳಲ್ಲಿ ಮಹಿಳೆಯರ ಪ್ರವೇಶ, ಪಾರ್ಸಿ ಮಹಿಳೆಯರು ಮತ್ತು ದಾವೂದಿ ಬೊಹ್ರಾ ಕೇಸಿನ ರೀತಿಯಲ್ಲಿಯೇ ಶಬರಿಮಲೆ ತೀರ್ಪು ಸಹ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಹೋಗಬಹುದು ಎಂದು ನೀಡಿದ್ದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ 65 ಮನವಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ವಿಸ್ತ್ತೃತ ಪೀಠಕ್ಕೆ ವರ್ಗಾಯಿಸಿತು.


ಮಾಹಿತಿ ಹಕ್ಕು ಕಾಯ್ದೆಯಡಿಗೆ ಮುಖ್ಯ ನ್ಯಾಯಮೂರ್ತಿ ಕಚೇರಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಸಾರ್ವಜನಿಕ ಪ್ರಾಧಿಕಾರವಾಗಿದ್ದು ಇದು ಮಾಹಿತಿ ಹಕ್ಕು ಕಾಯ್ದೆಯಡಿ ಬರುತ್ತದೆ ಎಂದು ಕಳೆದ ನವೆಂಬರ್ 13ರಂದು ಸುಪ್ರೀಂ ಕೋರ್ಟ್ ಆದೇಶಸಿತು. ಆದರೆ ಗೌಪ್ಯ ಕೇಸುಗಳಲ್ಲಿ ನ್ಯಾಯಾಧೀಶರ ರಕ್ಷಣೆಯನ್ನು ಕೂಡ ಮಾಡಬೇಕಾಗುತ್ತದೆ ಎಂದು ಹೇಳಿತು. 


ಮಹಾರಾಷ್ಟ್ರ ಸರ್ಕಾರ ರಚನೆ ವಿವಾದ: ಕಳೆದ ವರ್ಷಾಂತ್ಯಕ್ಕೆ ಹೆಚ್ಚು ಸದ್ದು ಮಾಡಿದ್ದು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಗ್ಗಂಟು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ನವೆಂಬರ್ 26ರಂದು ಸುಪ್ರೀಂ ಕೋರ್ಟ್ ಆದೇಶ ಮಾಡಿತು. ಅದಕ್ಕಿಂತ ಮುನ್ನ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಕೊಂಡಿದ್ದರು. 


ಬಹುಮತ ಸಾಬೀತನ್ನು ನೇರವಾಗಿ ಪ್ರಸಾರ ಮಾಡಬೇಕು, ಮತ್ತು ಗೌಪ್ಯ ಮತದಾನದ ಮೂಲಕ ಆಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಬಹುಮತದ ಕೊರತೆಯಿಂದ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚನೆ ಮಾಡಿತು. ಈ ಸರ್ಕಾರ ರಚನೆ ಕಗ್ಗಂಟು ಸುಮಾರು ಒಂದು ತಿಂಗಳ ಕಾಲ ಮುಂದುವರಿಯಿತು. ಈ ವೇಳೆ ಸುಪ್ರೀಂ ಕೋರ್ಟ್ ನಲ್ಲಿ ಭಾನುವಾರ ಕೂಡ ವಿಚಾರಣೆ ನಡೆದಿತ್ತು.

ಎಸ್ಸಾರ್ ಸ್ಟೀಲ್ ಕೇಸು: ಎಸ್ಸಾರ್ ಸ್ಟೀಲ್ ನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಅರ್ಸೆಲಾರ್ ಮಿತ್ತಲ್ ಗೆ ಸುಪ್ರೀಂ ಕೋರ್ಟ್ ಅನುವು ಮಾಡಿಕೊಟ್ಟಿತು. ಭಾರತದ ಕಾರ್ಪೊರೇಟ್ ಕ್ಷೇತ್ರದಲ್ಲಿ ತೀವ್ರ ಸಾಲ ಮತ್ತು ದಿವಾಳಿಯ ಹಂತಕ್ಕೆ ತಲುಪಿದ ಕಂಪೆನಿಗಳನ್ನು ತೆಗೆದುಕೊಳ್ಳುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವಪೂರ್ಣ ತೀರ್ಪು ಇದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com