ಬಿಜೆಪಿ ಆಳ್ವಿಕೆಯ ರಾಜ್ಯಗಳ ಸಂಖ್ಯೆ ಇಳಿಕೆ: ಒಂದೇ ವರ್ಷದಲ್ಲಿ 5 ರಾಜ್ಯಗಳ ಕಳೆದುಕೊಂಡ ಕಮಲ ಪಾಳಯ

ಜಾರ್ಖಾಂಡ್ ವಿಧಾನಸಬೆ ಚುನಾವಣೆಯಲ್ಲಿ ಬಿಜೆಪಿ ಸೋಲುವುದರೊಂದಿಗೆ ಕಳೆದ 1 ವರ್ಷದಲ್ಲಿ 5 ರಾಜ್ಯಗಳು ಬಿಜೆಪಿಯ ಕೈಯಿಂದ ಜಾರಿದಂತಾಗಿದೆ. ಇದರಿಂದಾಗಿ ಈ ಸತತ ಸೋಲುಗಳು ಬಿಜೆಪಿ ಪಾಳಯಕ್ಕೆ ಭವಿಷ್ಯದಲ್ಲಿ ಎಚ್ಚರಿಕೆ ಗಂಟೆಯಾಗಿವೆ ಎಂದೇ ಹೇಳಲಾಗುತ್ತಿದೆ. 

Published: 24th December 2019 08:23 AM  |   Last Updated: 24th December 2019 08:23 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಮಹಾರಾಷ್ಚ್ರಗಳ ಬಳಿಕ ಜಾರ್ಖಾಂಡ್ ರಾಜ್ಯದಲ್ಲೂ ಸೋಲು ಕಂಡ ಬಿಜೆಪಿ

ನವದೆಹಲಿ: ಜಾರ್ಖಾಂಡ್ ವಿಧಾನಸಬೆ ಚುನಾವಣೆಯಲ್ಲಿ ಬಿಜೆಪಿ ಸೋಲುವುದರೊಂದಿಗೆ ಕಳೆದ 1 ವರ್ಷದಲ್ಲಿ 5 ರಾಜ್ಯಗಳು ಬಿಜೆಪಿಯ ಕೈಯಿಂದ ಜಾರಿದಂತಾಗಿದೆ. ಇದರಿಂದಾಗಿ ಈ ಸತತ ಸೋಲುಗಳು ಬಿಜೆಪಿ ಪಾಳಯಕ್ಕೆ ಭವಿಷ್ಯದಲ್ಲಿ ಎಚ್ಚರಿಕೆ ಗಂಟೆಯಾಗಿವೆ ಎಂದೇ ಹೇಳಲಾಗುತ್ತಿದೆ. 

2018ರ ಅಂತ್ಯದಲ್ಲಿ ನಡೆದ ರಾಜ್ಯಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿತ್ತು. ನಂತರ ಮಹಾರಾಷ್ಟ್ರದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮಿತ್ರಪಕ್ಷ ಶಿವಸೇನೆಯ ಜೊತೆಗಿನ ಮುನಿಸಿನ ಕಾರಣ ಅಧಿಕಾರಕ್ಕೆ ಏರಲು ಸಾಧ್ಯವಾಗಲಿಲ್ಲ. 

ಇದೀಗ ಜಾರ್ಖಾಂಡ್ ರಾಜ್ಯದಲ್ಲಿ ಬಿಜೆಪಿ ಸೋಲು ಕಂಡಿದೆ. ಇತ್ತೀಚೆಗೆ ಹರಿಯಾಣದಲ್ಲಿ ಕೂಡ ಬಿಜೆಪಿಗೆ ಬಹುಮತ ಪ್ರಾಪ್ತಿಯಾಗಲು ಸಾಧ್ಯವಾಗಿಲಿಲ್ಲ. ಆದರೆ, ದುಷ್ಯಂತ್ ಚೌಟಾಲಾ ಅವರ ಜನನಾಯಕ ಜನತಾ ಪಕ್ಷದ ಬೆಂಬಲದಿಂದ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು. 

ಇಷ್ಟಕ್ಕೂ ಬಿಜೆಪಿಗೆ ಸೋಲಿ ಕಾರಣವಾದ ಅಂಶವಾದರೂ ಏನು? 

  • ಆದಿವಾಸಿ ಜನಾಂಗ ಜಾರ್ಖಾಂಡ್ ನಲ್ಲಿ ಪ್ರಬಲ. ಆದರೆ, ಆದಿವಾಸಿಯಲ್ಲದ ರಘುಬರ ದಾಸ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಮಾಡಿದ್ದು. 
  • ಈ ಚುನಾವಣೆಯಲ್ಲಿ ಮೋದಿ ಅವರು ಚುನಾವಣಾ ವಿಷಯವಾಗಿರಲಿಲ್ಲ. ರಾಜ್ಯ ಸರ್ಕಾರದ ಸಾಧನೆಗಳ ಾಧಾರದಲ್ಲಿ ಚುನಾವಣೆ ನಡೆಯಿತು. 
  • ರಾಜ್ಯದ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರಿಗಳಿಗೆ ಮಣೆ. ಹೀಗಾಗಿ ಇದು ವಿಭಿನ್ನ ಸರ್ಕಾರವಲ್ಲ ಎಂದು ಜನತೆಗೆ ಎನಿಸಿತ್ತು. 
  • ರಘುಬರ ದಾಸ್ ದರ್ಪದ ಮನುಷ್ಯ. ಅಧಿಕಾರ ಅವರ ತಲೆಗೇರಿದ ಎಂದು ಜನರ ಮನಸ್ಸಿನಲ್ಲಿ ಬೇರೂರಿತ್ತು. 
  • ಜಾರ್ಖಾಂಡ್ ರಾಜ್ಯವನ್ನು ಆದಿವಾಸಿ ಮುಕ್ತ ರಾಜ್ಯ ಮಾಡುತ್ತೇನೆಂದು ದಾಸ್ ಒಮ್ಮೆ ಹೇಳಿದ್ದರು. ಬುಡಕಟ್ಟು ಕಾಯ್ದೆ ತಿದ್ದುಪಡಿಗಳ ಆದಿವಾಸಿಗಳ ಆಕ್ರೋಶಕ್ಕೆ ಇದು ಕಾರಣವಾಗಿತ್ತು. 
  • ಮಿತ್ರ ಪಕ್ಷವಾಗಿ ಎಜೆಎಸ್'ಯುವನ್ನು ಕೈಬಿಟ್ಟ ದಾಸ್, ಬಿಜೆಪಿಯ ಇತರ ನಾಯಕರ ಬಗ್ಗೆಯೂ ನಿರ್ಲಕ್ಷ್ಯ. ಏಕಾಂಗಿಯಾಗಿ ಚುನಾವಣೆಗೆ ಹೋಗಿದ್ದರಿಂದ ಬಿಜೆಪಿಗೆ ನಷ್ಟ. 
Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp