ಮುಸ್ಲಿಂರಿಗೆ 150 ರಾಷ್ಟ್ರ: ಹಿಂದೂಗಳಿಗೆ ಭಾರತ ಒಂದೇ ರಾಷ್ಟ್ರ- ಗುಜರಾತ್ ಮುಖ್ಯಮಂತ್ರಿ

ಮುಸ್ಲಿಂರು ವಾಸಿಸಲು ವಿಶ್ವದಲ್ಲಿನ 150 ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಯಾವುದಾದರೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಆದರೆ, ಹಿಂದೂಗಳಿಗಿರುವುದು ಭಾರತ ಒಂದೇ ರಾಷ್ಟ್ರ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳುವ ಮೂಲಕ ಪೌರತ್ನ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಜಯ್ ರೂಪಾನಿ
ವಿಜಯ್ ರೂಪಾನಿ

ಅಹ್ಮದಾಬಾದ್ : ಮುಸ್ಲಿಂರು ವಾಸಿಸಲು ವಿಶ್ವದಲ್ಲಿನ 150 ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಯಾವುದಾದರೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಆದರೆ, ಹಿಂದೂಗಳಿಗಿರುವುದು ಭಾರತ ಒಂದೇ ರಾಷ್ಟ್ರ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳುವ ಮೂಲಕ ಪೌರತ್ನ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಬರಮತಿ ಆಶ್ರಮದ ಹೊರಗಡೆ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಡೆಸಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನೂತನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಷಯದಲ್ಲಿ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಶಯಗಳನ್ನು ಕಾಂಗ್ರೆಸ್ ಗೌರವಿಸುತ್ತಿಲ್ಲ ಎಂದು  ಅವರು ಆರೋಪಿಸಿದರು. 

ದೇಶ ವಿಭಜನೆಗೊಂಡಾಗ ಪಾಕಿಸ್ತಾನದಲ್ಲಿ ಶೇ. 22 ರಷ್ಟು ಹಿಂದೂಗಳಿದ್ದರು. ಆದರೆ, ಈಗ  ಅತ್ಯಾಚಾರ, ನಿರಂತರ ದೌರ್ಜನ್ಯದಿಂದ ಅಲ್ಲಿನ ಹಿಂದೂಗಳ ಸಂಖ್ಯೆ ಶೇ. 3 ರಷ್ಟಾಗಿದೆ. ಆದ್ದರಿಂದ ಹಿಂದೂಗಳು ಭಾರತಕ್ಕೆ ವಾಪಾಸ್ ಬರಬೇಕಾಗಿದೆ ಎಂದರು. 

ಈ ತೊಂದರೆಗೀಡಾದ ಹಿಂದೂಗಳಿಗೆ ಸಹಾಯ ಮಾಡಲು ಕಾಂಗ್ರೆಸ್ ಏನು ಮಾಡಬೇಕೋ ಅದನ್ನು ನಾವು ಮಾಡುತ್ತಿದ್ದೇವೆ. ಆದರೆ, ನೀವು ವಿರೋಧಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. 

ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಶೇ. 2, ಕೆಲ ದಶಕಗಳ ಹಿಂದೆ 2 ಲಕ್ಷ ಹಿಂದೂಗಳು ಹಾಗೂ ಸಿಖ್ಖರು ವಾಸಿಸುತ್ತಿದ್ದ ಅಪ್ಘಾನಿಸ್ತಾನದಲ್ಲಿ ಈಗ ಹಿಂದೂಗಳ ಸಂಖ್ಯೆ 500 ಆಗಿದೆ. ಮುಸ್ಲಿಂರು 150 ರಾಷ್ಟ್ರಗಳಲ್ಲಿ ಏಲ್ಲಿ ಬೇಕಾದರೂ ವಾಸಿಸಬಹುದು ಆದರೆ, ಹಿಂದೂಗಳಿಗೆ ಭಾರತ ಬಿಟ್ಟರೇ ಬೇರೆ ರಾಷ್ಟ್ರವಿಲ್ಲ. ಆದ್ದರಿಂದ ಅವರು ವಾಪಾಸ್ ದೇಶಕ್ಕೆ ಮರಳಿದರೆ ಏನು ತೊಂದರೆ ಎಂದು ರೂಪಾನಿ ಪ್ರಶ್ನಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com